ದೇವರ ಪ್ರಾರ್ಥನೆಯ ಜತೆಯಲ್ಲಿ ಸಮಾಜ ಸೇವೆ ಮಾಡುತ್ತಾ ಸಮಾಜಕ್ಕೆ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾದರಿಯಾಗಿದ್ದಾರೆ. ತ್ಯಾಗ ಹಾಗೂ ಸೇವೆಯ ಧ್ಯಾನದಿಂದ ಅದಾಗಲೇ ಎಂಟು ಮನೆಗಳನ್ನು ಅಶಕ್ತ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ. ಮುಂದೆ ಕ್ಯಾನ್ಸರ್ ರೋಗಿಗಳಿಗಾಗಿ ಟ್ರಸ್ಟ್ ರಚಿಸಿ ಸಹಕಾರ ನೀಡಲಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು. ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಸಂತೋಷ್ ರೈ ಬೋಳಿಯಾರ್ ಸ್ವಂತ ಖರ್ಚಿನಲ್ಲಿ ಕುರ್ನಾಡುವಿನ ರಾಜೇಶ್ ಮಡಿವಾಳ್ ಅವರಿಗೆ ನಿರ್ಮಿಸಿದ ನಮೋ ಕುಟೀರ 8ನೇ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.




ಭಾಸ್ಕರ್ ಭಟ್ ಹಾಗೂ ವಿನಯ್ ಭಟ್ ಅವರು ಗೃಹ ಪೂಜೆ ನೆರವೇರಿಸಿದರು. ಶಿವ ಕೊಂಡಾಣ ಶ್ರೀ ಶಿವ ದುರ್ಗಾಂಬಾ ಕ್ಷೇತ್ರದ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಮುಖಂಡರಾದ ಪಿ.ಎಸ್ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದೇವಿಪ್ರಸಾದ್ ಪೊಯ್ಯತ್ತಾಯ, ಮಂಜು ಭಂಡಾರಿ, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ ಪಂಡಿತ್ ಹೌಸ್, ಸಂತೋಷ್ rai ಅವರ ಪತ್ನಿ ವೀಣಾ ಸಂತೋಷ್ ರೈ, ಸ್ಪರ್ಶ ಎಸ್ ರೈ, ಸಮ್ಯುಕ್ತ್ ರೈ, ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು, ರವಿಶಂಕರ್ ಸೋಮೇಶ್ವರ, ಸುಧಾಕರ ಭಟ್, ರವೀಂದ್ರ ರೈ ಕಳ್ಳಿಮಾರ್, ಯಶವಂತ ಅಮೀನ್, ದಯಾನಂದ ತೊಕ್ಕೊಟ್ಟು, ರಮೇಶ್ ಶೇಣವ, ಕೃಷ್ಣ ಮೂಲ್ಯ ಹಾಗೂ ಶೀನ ಶೆಟ್ಟಿ ಉಪಸ್ಥಿತರಿದ್ದರು. ಆನಂದ ಶೆಟ್ಟಿ ವಂದಿಸಿದರು.


















































































































