ಅಶೋಕನಗರ -ಉರ್ವ ಬಂಟರ ಸಂಘದ 2025 -26ನೇ ಸಾಲಿನ ನೂತನ ಅಧ್ಯಕ್ಷರಾಗಿ ಹೋಟೆಲು ಉದ್ಯಮಿ ಹಾಗೂ ಸಮಾಜ ಸೇವಕರಾದ ಸುಧಾಕರ ಆಳ್ವ ಅವರು ಅವಿರೋಧವಾಗಿ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಶಂಭು ಶೆಟ್ಟಿ, ಉಪಾಧ್ಯಕ್ಷರಾಗಿ ಸತೀಶ್ ಆಳ್ವ ಮುಡಾರೆ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ಕೊಡಿಯಾಲಬೈಲ್, ಕೋಶಾಧಿಕಾರಿಯಾಗಿ ರಾಜೇಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಶೇಖರ ಶೆಟ್ಟಿ ಗುರುಂಪೆ, ಜತೆ ಕಾರ್ಯದರ್ಶಿಗಳಾಗಿ ಶೇಖರ ಶೆಟ್ಟಿ ಅತ್ತೂರು ಹಾಗೂ ಶಿಲ್ಪಾ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಸುಪ್ರೀತಾ ಉದಯ್ ಶೆಟ್ಟಿ, ಆಂತರಿಕ ಲೆಕ್ಕಪರಿಶೋಧಕರಾಗಿ ನಾರಾಯಣ ಶೆಟ್ಟಿ ದಂಬೆಲ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹದಿಮೂರು ಮಂದಿ ಆಯ್ಕೆಯಾದರು.





















































































































