ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕುಡ್ಲ ವತಿಯಿಂದ ‘ಕೊಡಿಯಡಿತ ನಿರೆಲ್ ಇರುವರದ ಲೇಸದ ಗೌಜಿ’ ಕಾರ್ಯಕ್ರಮದ ಪ್ರಯುಕ್ತ ಕಾವೂರು ವ್ಯವಸಾಯ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಟ್ರಸ್ಟ್ ಸದಸ್ಯರಿಗೆ ಅಂಚೆ ವಿಮೆ ಮತ್ತು ಆರೋಗ್ಯ ತಪಾಸನೆ ಶಿಬಿರ ಆಯೋಜಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎ ಲೋಕೇಶ್ ಭಂಡಾರಿ ಮಾತನಾಡಿ, ದೈವಪರಿಚಾರಕರು ತುಳುನಾಡ ದೈವ ಪರಿಚಾರಕಾರ ಕ್ಷೇಮಾಭಿವೃದ್ಧಿ ಟ್ರಸ್ಟ್ ಮೂಲಕ ಸಂಘಟಿತರಾಗಿರುವುದು ಶ್ಲಾಘನೀಯ. ಸಂಘಟನೆಯಿಂದಾಗಿ ಸದಸ್ಯರಿಗೆ ಇಂತಹ ಸೌಲಭ್ಯಗಳು ದೊರೆಯಲು ಸಾಧ್ಯವಾಗಿದೆ. ಇನ್ನಷ್ಟು ಸಂಘಟಿತರಾಗುವ ಮೂಲಕ ಸರಕಾರದ ಮಟ್ಟದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದರು.




ಮುಖ್ಯ ಅತಿಥಿಯಾಗಿದ್ದ ಅಂಚೆ ಇಲಾಖೆಯ ಅಧೀಕ್ಷಕ ಜೋಸೆಫ್ ರೋಡ್ರಿಗಸ್, ಅಂಚೆ ಇಲಾಖೆಯ ವಿವಿಧ ಸವಲತ್ತುಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಉರ್ವದ ಕೊರಗಜ್ಜ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಶ್ ಉರ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಟ್ರಸ್ಟ್ ಅಧ್ಯಕ್ಷ ಲಕ್ಷ್ಮಿನಾರಾಯಣ ಎಂ, ಗೌರವಾಧ್ಯಕ್ಷ ಉದಯ ಸಾಲ್ಯಾನ್ ಮುಳಿಹಿತ್ಲು, ಉಪಾಧ್ಯಕ್ಷ ವಿಜಯ್ ಚೌಟ, ಸಂಘಟನಾ ಕಾರ್ಯದರ್ಶಿ ರವಿ ಜೋಗಿ, ಟ್ರಸ್ಟಿನ ಸಾಮಾಜಿಕ ಜಾಲತಾಣ ಪ್ರಚಾರಕ ನಿತೇಶ್ ಕುಮಾರ್ ಪದವಿನಂಗಡಿ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ ಕಾವೂರು, ಕೋಶಾಧಿಕಾರಿ ಜಿತೇಶ್ ಮಾಡೂರು, ಜತೆ ಕಾರ್ಯದರ್ಶಿ ಸುದರ್ಶನ್ ಸನಿಲ್ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಕಾವೂರು ಸದಾಶಿವ ಪೂಜಾರಿ ಪ್ರಸ್ತಾವಿಸಿದರು. ಟ್ರಸ್ಟಿನ ಸಲಹೆಗಾರ ಹರ್ಷಕುಮಾರ್ ವಂದಿಸಿದರು. ಶ್ರುತನ್ ಶೆಟ್ಟಿ ಚಾವಡಿದ ಅಡಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿನ 620 ಸದಸ್ಯರಿಗೆ ಅಂಚೆ ವಿಮೆ ಮಾಡಲಾಯಿತು ಹಾಗೂ ಎ.ಜೆ. ಹಾಸ್ಪಿಟಲ್ ಸಹಕಾರದೊಂದಿಗೆ ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಯಿತು.

















































































































