ಬಂಟರ ಸಂಘ ಬಂಟ್ವಾಳ ತಾಲೂಕು (ರಿ) ಇದರ ನೇತೃತ್ವದಲ್ಲಿ, ಮಹಿಳಾ ವಿಭಾಗದ ಸಹಕಾರದೊಂದಿಗೆ, ಯುವ ವಿಭಾಗದ ವತಿಯಿಂದ ಬಂಟ್ವಾಳ ತಾಲೂಕಿನ ಅಶಕ್ತ ಕುಟುಂಬಕ್ಕೆ ಗೃಹ ನಿರ್ಮಾಣ ಮತ್ತು ಆರ್ಥಿಕ ಸಹಾಯಾರ್ಥದ ಸಲುವಾಗಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ಮಂಡಲ (ರಿ) ಇರಾ ಇದರ ಕಲಾವಿದರಿಂದ ‘ಮಹಿಮೆದ ಅಪ್ಪೆ ಭಗವತಿ’ ಎಂಬ ತುಳು ಪೌರಾಣಿಕ ನಾಟಕದ ಪ್ರದರ್ಶನ ಅಕ್ಟೋಬರ್ 3 ರಂದು ಶನಿವಾರ ಬಂಟ್ವಾಳದ ಬಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಹೈ ಗ್ರೌಂಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಶ್ರೀಮತಿ ಕಾತ್ಯಾಯಿನಿ ಆಳ್ವ, ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಸಿಎ ನಿಶಿತ್ ಭಂಡಾರಿ, ಖ್ಯಾತ ನಿರೂಪಕರು, ನಾಟಕ ರಚನೆಗಾರರಾದ ನವನೀತ ಶೆಟ್ಟಿ ಕದ್ರಿ, ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ ರೈಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳಿಗೆ ಸ್ವಾಗತ ಕೋರಿದರು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಭರತನಾಟ್ಯದಲ್ಲಿ ಸಾಧನೆಯನ್ನು ಮಾಡಿದ ಯುವ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯೆ ವಿದುಷಿ ಸಹನಾ ಎಂ ಶೆಟ್ಟಿ ನರ್ವಲ್ದಡ್ಡರವರಿಗೆ ಸನ್ಮಾನ, ನಾಟಕದ ರಚನೆಗಾರರಾದ ಕದ್ರಿ ನವನೀತ ಶೆಟ್ಟಿಯವರಿಗೆ ಮತ್ತು ನಿರ್ದೇಶಕರಾದ ನಿತೇಶ್ ಶೆಟ್ಟಿ ಇರಾ ಇವರಿಗೆ ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸಜಿಪ, ಜೊತೆ ಕೋಶಾಧಿಕಾರಿ ಶ್ರೀಮತಿ ವಿದ್ಯಾ ಎ ರೈ, ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು. ಯುವ ವಿಭಾಗದ ಕಾರ್ಯದರ್ಶಿ ಸುನಾದ್ ರಾಜ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಜೊತೆ ಕಾರ್ಯದರ್ಶಿ ಸುವೀಕ್ಷ ಭಂಡಾರಿ ವಂದಿಸಿದರು. ನಾಗೇಶ್ ಶೆಟ್ಟಿ ಬೊಂಡಾಲ ಕಾರ್ಯಕ್ರಮ ನಿರೂಪಿಸಿದರು. ಯುವ ವಿಭಾಗದ ಉಪಾಧ್ಯಕ್ಷ ರಂಜಿತ್ ಶೆಟ್ಟಿ ಮತ್ತು ಕೋಶಾಧಿಕಾರಿ ರತನ್ ರೈಯವರು ಸಹಕರಿಸಿದರು.














































































































