ಅಕ್ಟೋಬರ್ 5 ರಂದು ಕುರ್ಲಾ ಪೂರ್ವದ ಬಂಟರ ಭವನದ ಸಂಕೀರ್ಣದಲ್ಲಿರುವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಪ್ರಧಾನ ಕಚೇರಿಗೆ ಸೊಸೈಟಿಯ ಪೋಷಕರು ಹಾಗೂ ಹಿತೈಷಿಗಳಲ್ಲೊಬ್ಬರಾದ ಎಂ.ಆರ್.ಜಿ ಗ್ರೂಪ್ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ ಆಗಮಿಸಿ, ವ್ಯವಹಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಹೂಗುಚ್ಛ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ರಕ್ಷಿ ಬಿಲ್ಡರ್ಸ್ ಸಿಎಂಡಿ ರಾಜೇಶ್ ಎನ್ ಶೆಟ್ಟಿ, ನಿರ್ದೇಶಕ ಶಶಿಧರ್ ಕೆ. ಶೆಟ್ಟಿ, ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಉಪಸ್ಥರಿದ್ದರು.

















































































































