
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ 2026 ರ ಸಾಲಿನ ಬಂಟರ ಕ್ರೀಡೋತ್ಸವದಲ್ಲಿ ಕಾವೂರು ಬಂಟರ ಸಂಘವು ಪಥ ಸಂಚಲನ (March Past) ವಿಭಾಗದಲ್ಲಿ ಕಾವೂರು ಬಂಟರ ಸಂಘ ಭಾಗವಹಿಸಿ ಅತ್ಯಂತ ಆಕರ್ಷಕ ಮತ್ತು ಸಾಂಪ್ರದಾಯಿಕ ಶಿಸ್ತಿನಿಂದ ಕೂಡಿದ ತಂಡವಾಗಿ ಹೊರಹೊಮ್ಮಿ ಪ್ರಥಮ ಸ್ಥಾನ ಪಡೆಯಿತು. ವಿವಿಧ ಪ್ರಾದೇಶಿಕ ಬಂಟರ ಸಂಘಗಳು ತಮ್ಮ ಸಾಂಪ್ರದಾಯಿಕ ಉಡುಪುಗಳೊಂದಿಗೆ ಹಾಗೂ ಕ್ರೀಡಾ ಶಿಸ್ತಿನೊಂದಿಗೆ ಈ ಪಥ ಸಂಚಲನದಲ್ಲಿ ಭಾಗವಹಿಸಿತ್ತು.ಮಾಜಿ ರಣಜಿ ಕ್ರಿಕೆಟ್ ಆಟಗಾರ ರಕ್ಷಣ್ ರೈ ಅವರು ಕ್ರೀಡಾಪಟುಗಳ ಭವ್ಯ ಪಥಸಂಚಲನಕ್ಕೆ ಚಾಲನೆ ನೀಡಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯoತಾಯ, ಡಾ. ಶಿವಶರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.















































































































