ಇತ್ತೀಚೆಗೆ ನಿಧನ ಹೊಂದಿದ ಸಿವಿಲ್ ಕಂಟ್ರಾಕ್ಟರ್, ಉದ್ಯಮಿ ಸುರತ್ಕಲ್ ಬಂಟರ ಸಂಘದ ಮಾಜಿ ಉಪಾಧ್ಯಕ್ಷ ನಡ್ಯೋಡಿಗುತ್ತು ಈರಯ್ಯ ಶೆಟ್ಟಿ (ಈ.ಟಿ ಶೆಟ್ಟಿ) ಪಂಜ ಅವರ ನಿಧನಕ್ಕೆ ಸುರತ್ಕಲ್ ಬಂಟರ ಸಂಘದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು. ಸುರತ್ಕಲ್ ಬಂಟರ ಸಂಘ ಸ್ಥಾಪನೆಯ ಸಂದರ್ಭದಲ್ಲಿ ಈ.ಟಿ ಶೆಟ್ಟಿಯವರ ಸಂಘಟನಾ ಕೆಲಸ ಮತ್ತು ಯುವಕರನ್ನು ಹುರಿದುಂಬಿಸಿ ಕೆಲಸ ಮಾಡುತ್ತಿದ್ದರು ಎಂದು ಸಂಘದ ಸ್ಥಾಪಕಾಧ್ಯಕ್ಷ ಕುಳಾಯಿಗುತ್ತು ರೋಹಿರಾಕ್ಷ ರೈ ನುಡಿನಮನ ಸಲ್ಲಿಸಿ ಮಾತನಾಡಿದರು. 2001 ರಲ್ಲಿ ಸುರತ್ಕಲ್ ನಲ್ಲಿ ನಡೆದ ವಿಶ್ವ ಬಂಟರ ಕಲೋತ್ಸವದಲ್ಲಿ ಈ.ಟಿ ಶೆಟ್ಟಿಯವರು ಯುವಕರನ್ನು ಸಂಘಟನಾತ್ಮಕವಾಗಿ ದುಡಿಸಿ ಕೆಲಸ ಮಾಡಿದ್ದರು ಎಂದು ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ತಿಳಿಸಿದರು. ಸುರತ್ಕಲ್ ಬಂಟರ ಸಂಘದಲ್ಲಿ ಈ.ಟಿ ಶೆಟ್ಟಿ ಅವರ ಕೆಲಸದ ಬದ್ದತೆ ಮತ್ತು ಯುವಕರಿಗೆ ಮಾರ್ಗದರ್ಶಕರಾಗಿ ಅವರು ಪ್ರೇರೇಪಣಾ ಶಕ್ತಿಯಾಗಿದ್ದರು ಎಂದು ಮಾಜಿ ಅಧ್ಯಕ್ಷ ಎಂ.ಜೆ ಶೆಟ್ಟಿ ಕುಳಾಯಿ ತಿಳಿಸಿದರು.




ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ನಿಕಟ ಪೂರ್ವಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಮಾಜಿ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರು ಗುತ್ತು, ಕಾರ್ಯಕಾರಿ ಸಮಿತಿ ಸದಸ್ಯ ಗಿರೀಶ್ ಎಂ ಶೆಟ್ಟಿ ಕಟೀಲು, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸತೀಶ್ ಶೆಟ್ಟಿ ಪಂಜ, ಸುಜಾತ ಶೆಟ್ಟಿ, ಹರೀಶ್ ಶೆಟ್ಟಿ ನುಡಿ ನಮನ ಸಲ್ಲಿಸಿದರು. ಸಂಘದ ಮಾಜಿ ಉಪಾಧ್ಯಕ್ಷ ಮಹಾಬಲ ರೈ ಮುಕ್ಕ, ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ, ಕಾರ್ಯ ದರ್ಶಿ ರಾಜೇಶ್ವರಿ ಡಿ ಶೆಟ್ಟಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಸುರತ್ಕಲ್ ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಬಾಳ, ಮಾಜಿ ಅಧ್ಯಕ್ಷ ಸುಧಾಕರ ಪೂಂಜ, ಆಶ್ರಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.












































































































