ಸೇವಾ ಚಟುವಟಿಕೆಗಳು, ಸಮಾಜಮುಖಿ ಯೋಜನೆಗಳು ಹಾಗೂ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಗಮನ ಸೆಳೆದಿರುವ ಪ್ರತಿಷ್ಠಿತ ರೋಟರಿ ಕ್ಲಬ್ ಕಾರ್ಕಳಕ್ಕೆ 2025 -26ನೇ ಸಾಲಿನಲ್ಲಿ ರೋಟರಿ ಇಂಟರ್ನ್ಯಾಷನಲ್ ಜಿಲ್ಲಾ 3182 ವತಿಯಿಂದ 32 ಪ್ರಶಸ್ತಿಗಳ ಜೊತೆಗೆ ಎರಡು ಮಹತ್ವದ ಗೌರವಗಳು ಲಭಿಸಿವೆ. ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182 ರ ಡಿಸ್ಟ್ರಿಕ್ಟ್ ಅವಾರ್ಡ್ಸ್, 2025 -26ರಲ್ಲಿ ಕಾರ್ಕಳ ರೋಟರಿ ಕ್ಲಬ್ ದೊಡ್ಡ ಕ್ಲಬ್ಗಳ (Large Club Category) ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ಈ ಸಾಧನೆಯ ಸಂಕೇತವಾಗಿ ಕ್ಲಬ್ಗೆ ಸುಂದರವಾದ ಟ್ರೋಫಿಯನ್ನು ನೀಡಿ ಗೌರವಿಸಲಾಗಿದೆ. ಇದರೊಂದಿಗೆ ರೋಟರಿ ಇಂಟರ್ನ್ಯಾಷನಲ್ ವತಿಯಿಂದ ನೀಡಲಾಗುವ 2025 -26ನೇ ಸಾಲಿನ ‘ಕ್ಲಬ್ ಎಕ್ಸಲೆನ್ಸ್ ಅವಾರ್ಡ್’ ಕೂಡಾ ರೋಟರಿ ಕ್ಲಬ್ ಕಾರ್ಕಳಕ್ಕೆ ದೊರೆತಿದೆ. ಸದಸ್ಯರಿಗೆ ಉತ್ತಮ ಅನುಭವವನ್ನು ಒದಗಿಸುವುದರ ಜೊತೆಗೆ ರೋಟರಿಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಅತ್ಯುತ್ತಮ ಕಾರ್ಯ ನಿರ್ವಹಣೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.





ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋ. ಕೆ ನವೀನ್ ಚಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿ ರೋ. ಚೇತನ್ ನಾಯಕ್ ಅವರ ನೇತೃತ್ವದಲ್ಲಿ ಕ್ಲಬ್ ಶಿಕ್ಷಣ, ಆರೋಗ್ಯ, ಪರಿಸರ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಪ್ರತಿಫಲವಾಗಿ ಈ ಗೌರವಗಳು ದೊರೆತಿವೆ. ಜಿಲ್ಲಾ 3182ರ ಡಿಸ್ಟ್ರಿಕ್ಟ್ ಗವರ್ನರ್ ರೋ. ಕೆ ಪಾಲಾಕ್ಷ, ಅಸಿಸ್ಟೆಂಟ್ ಗವರ್ನರ್ ರೋ. ವಿಗ್ನೇಶ್ ಶೆಣೈ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನ ಹಾಗೂ ಕ್ಲಬ್ನ ಎಲ್ಲಾ ಸದಸ್ಯರ ಸಹಕಾರ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಪ್ರಶಸ್ತಿಗಳು ಕ್ಲಬ್ನ ಸಾಧನೆಯ ಅಂತ್ಯವಲ್ಲ; ಇನ್ನಷ್ಟು ಸಮಾಜಮುಖಿ ಸೇವೆ ಮಾಡಲು ಸ್ಫೂರ್ತಿ ನೀಡುವ ಮೈಲುಗಲ್ಲುಗಳು. ಕಾರ್ಕಳ ರೋಟರಿ ಕ್ಲಬ್ನ ಪ್ರತಿಯೊಬ್ಬ ಸದಸ್ಯರ ಪರಿಶ್ರಮ ಮತ್ತು ತಂಡದ ಒಗ್ಗಟ್ಟಿಗೆ ಈ ಪ್ರಶಸ್ತಿಗಳು ಸಂದ ಗೌರವವಾಗಿದೆ ಎಂದು ಅಧ್ಯಕ್ಷ ರೋ. ಕೆ ನವೀನ್ ಚಂದ್ರ ಶೆಟ್ಟಿ ತಿಳಿಸಿದ್ದಾರೆ. ಕಾರ್ಕಳ ರೋಟರಿ ಕ್ಲಬ್ನ ನಿರಂತರ ಸೇವಾ ಪರಂಪರೆಗೆ ಮತ್ತಷ್ಟು ಮೆರುಗು ನೀಡಿರುವ ಈ ಎರಡು ಗೌರವಗಳಿಗೆ ಕ್ಲಬ್ನ ಸದಸ್ಯರು ಸಂತಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಹಾಗೂ ಶಾಶ್ವತ ಸೇವಾ ಯೋಜನೆಗಳನ್ನು ಕೈಗೊಳ್ಳುವ ಸಂಕಲ್ಪವನ್ನು ವ್ಯಕ್ತಪಡಿಸಿದ್ದಾರೆ.















































































































