
ಬಂಟರ ಸಂಘ (ರಿ) ಶಿರ್ವ ಇವರ ನೇತೃತ್ವದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಶಿರ್ವ ಇವರ ಸಹಯೋಗದೊಂದಿಗೆ ಶಿರ್ವ ಅಟ್ಟಿಂಜ ದಿವಂಗತ ಶಂಭು ಶೆಟ್ಟಿಯವರ ಸ್ಮರಣಾರ್ಥ ಆಗಸ್ಟ್ 9ರಂದು ಭಾನುವಾರ ಸಂಘ ಮಿತ್ರ ಕೊಲ್ಲಬೆಟ್ಟು ಶಿರ್ವ ಇಲ್ಲಿ ಬೆಳಿಗ್ಗೆ 9.00 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ನುರಿತ ವೈದ್ಯರ ತಂಡದಿಂದ ಬೃಹತ್ ರಕ್ತದಾನ ಶಿಬಿರವು ನಡೆಯಲಿದ್ದು, ಸಮಾಜ ಸೇವಕರಾದ ಉದ್ಯಮಿ ಮಂದಾರ ಮನೋಹರ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ರಕ್ತದಾನ ಶಿಬಿರದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಿರ್ವ ಬಂಟರ ಸಂಘದ ಅಧ್ಯಕ್ಷರಾದ ಕುತ್ಯಾರು ಕೇಂಜ ಸಾಯಿನಾಥ ಶೆಟ್ಟಿ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.

























































































































