ಸಿಂಧೂರ ಕಲಾವಿದೆರ್ ಕಾರ್ಲ ತಂಡದ 2026ನೇ ಸಾಲಿನ ನೂತನ ನಾಟಕದ ಶುಭ ಮುಹೂರ್ತ ಹಾಗೂ ನಾಟಕದ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಶ್ರೀ ಮೂಡು ಮಹಾಗಣಪತಿ ದೇವಸ್ಥಾನ ಬಂಡಿಮಠ ಕಾರ್ಕಳದಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತಂಡದ ಈ ವರ್ಷದ ನೂತನ ನಾಟಕದ ಶೀರ್ಷಿಕೆ ಪವನ್ ಕಾರ್ಲ ರಚಿಸಿರುವ ಸಂದೀಪ್ ಬಾರಡಿ ನಿರ್ದೇಶನದ “ಒಂಜಿ ಗುಜ್ಜೆದ ಕಥೆ”ಯನ್ನು ಅತಿಥಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.



ಕಾರ್ಯಕ್ರಮದಲ್ಲಿ ಸಿಂಧೂರ ತಂಡದ ಸಂಚಾಲಕರಾದ ವಿಜಯ ಶೆಟ್ಟಿ ಕಾರ್ಕಳ, ಪ್ರಸನ್ನ ಶೆಟ್ಟಿ ಬೈಲೂರು, ಸುನೀಲ್ ನೆಲ್ಲಿಗುಡ್ಡೆ, ಪ್ರವೀಣ್ ಶೆಟ್ಟಿ, ಸೀತಾರಾಮ ಶೆಟ್ಟಿ, ಚಂದ್ರನಾಥ ಬಜಗೋಳಿ, ನಿತಿನ್ ಪೂಜಾರಿ, ವಿಖ್ಯಾತ್ ಶೆಟ್ಟಿ, ನವೀನ್ ದೇವಾಡಿಗ, ಅಶೋಕ್ ಪೊಸಲಾಯಿ ಹಾಗೂ ಲೀಲಾವತಿ ಪೊಸಲಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದು ಸಿಂಧೂರ ಕಲಾವಿದೆರ್ ಕಾರ್ಲ ತಂಡಕ್ಕೆ ಶುಭ ಹಾರೈಸಿದರು. ಅತಿಥಿಗಳನ್ನು ಸಂದೀಪ್ ಬಾರಾಡಿ ಸ್ವಾಗತಿಸಿ, ತಾರಾನಾಥ ಬೋಳ ವಂದನಾರ್ಪಣೆ ಸಲ್ಲಿಸಿದರು. ಅಜಿತ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.




















































































































