


ಪ್ರಸ್ತುತ ಉದ್ಯೋಗದ ನೇಮಕಾತಿ ಪ್ರಕ್ರಿಯೆಯಲ್ಲಾದ ಬದಲಾವಣೆಗೆ ಒಗ್ಗಿಕೊಂಡು ಪದವಿ, ಅಂಕ, ಪ್ರಮಾಣಪತ್ರಗಳ ಜೊತೆ ತಮ್ಮಲ್ಲಿರುವ ಕೌಶಲ್ಯಗಳನ್ನು ಮನದಟ್ಟು ಮಾಡಿಸುವ ಸಾಮರ್ಥ್ಯ ಅವಶ್ಯಕ. ಅದರೊಂದಿಗೆ ನಡೆದು ಬಂದ ದಾರಿಯ ಸ್ಮರಣೆ, ಗುರು ಹಿರಿಯರ ಆಶೀರ್ವಾದವು ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲಿದೆ ಎಂದು ನಿಟ್ಟೆ ತಂತ್ರಜ್ಞಾನ ಸಂಸ್ಥೆಯ ಸಮಲೋಚನೆ, ಕಲ್ಯಾಣ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಹೇಳಿದರು. ಅವರು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಣಿಪುರ ಕುಂತಲ ನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ನ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ಉಚಿತ ಡಿಜಿಟಲ್ ಸಾಕ್ಷರತೆ ಕಂಪ್ಯೂಟರ್ ತರಬೇತಿ ಪೂರೈಸಿದ 21ನೇ ಬ್ಯಾಚ್ ನ ಅಭ್ಯರ್ಥಿಗಳಿಗೆ ಮೈನ್ಸ್ ಕಂಪ್ಯೂಟರ್ ಸಂಸ್ಥೆಯ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, 420 ಯುವಕರು, ಮಹಿಳೆಯರಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗಿದೆ. ಉದ್ಯೋಗ ಮೇಳದಡಿ 3,500 ಮಂದಿಗೆ ಉದ್ಯೋಗಾವಕಾಶ ಒದಗಿಸಿದೆ. ಆಗಸ್ಟ್ 9 ರಂದು ಈ ಬಾರಿ ಉದ್ಯೋಗ ಮೇಳ ನಡೆಯಲಿದೆ ಎಂದರು. ಉಡುಪಿ ಉಜ್ವಲ್ ಡೆವಲಪರ್ಸ್ ನ ಅಜಯ್ ಪಿ ಶೆಟ್ಟಿ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಎಚ್ ಬಿ ಶೆಟ್ಟಿ, ಉದ್ಯಮಿ ಮೋಹನ್ ಶೆಟ್ಟಿ ದೆಂದೂರು ಕಟ್ಟೆ, ಪ್ರೋಗ್ರಾಮ್ ಕೋರ್ಡಿನೇಟರ್ ಪದ್ಮನಾಭ ಹೆಗ್,ಡೆ ಟ್ರಸ್ಟಿಗಳಾದ ರಮೇಶ್ ಶೆಟ್ಟಿ, ದಯಾನಂದ ಶೆಟ್ಟಿ, ಹರೀಂದ್ರ ಹೆಗ್ಡೆ, ರಮೇಶ್ ಶೆಟ್ಟಿ, ಮೈಸ್ ಪ್ರಾಂಶುಪಾಲ ರವಿ ಕೋಟ್ಯಾನ್, ತರಬೇತುದಾರ ಉಪನ್ಯಾಸಕ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಜೀವಿತಾ ಶಿಬಿರಾರ್ಥಿಗಳ ಪಟ್ಟಿ ವಾಚಿಸಿದರು. ಸಂಘದ ಕಾರ್ಯದರ್ಶಿ ಟ್ರಸ್ಟ್ ಕೋಶಾಧಿಕಾರಿ ವಿಜಿತ್ ಶೆಟ್ಟಿ ವಂದಿಸಿದರು. ನಿಟ್ಟೆ ವಿವಿ ಪ್ರೊಫೆಸರ್ ಡಾ| ಸುಧೀರ್ ರಾಜ್ ಕಾರ್ಯಕ್ರಮ ನಿರೂಪಿಸಿದರು.





























































































































