
ಉಡುಪಿ ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಸಖಾರಾಮ ಶೆಟ್ಟಿಯವರ ಗೌರವಾರ್ಥ ನುಡಿ ನಮನ ಕಾರ್ಯಕ್ರಮವು ಹಾಲಿ ಅಧ್ಯಕ್ಷ ಡಾ. ಎಚ್.ಬಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಆಶಾ ಪ್ರಕಾಶ ಶೆಟ್ಟಿ ಕನ್ವೆನ್ಷನ್ ಸೆಂಟರ್ ಸಭಾಭವನದಲ್ಲಿ ಏಪ್ರಿಲ್ 24 ರಂದು ನಡೆಯಿತು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ಮಾತನಾಡಿ, ಉಡುಪಿ ಗ್ರಾಮೀಣ ಬಂಟರ ಸಂಘದ ಕಟ್ಟಡ ನಿರ್ಮಾಣ ಸಹಿತ ಸಮಗ್ರ ಅಭ್ಯುದಯಕ್ಕೆ ತೊಡಗಿಸಿಕೊಂಡಿದ್ದ ಸಖಾರಾಮ ಶೆಟ್ಟಿಯವರ ನಾಯಕತ್ವದ ಗುಣದಿಂದ ಊರಿನ ಅಭಿವೃದ್ಧಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು, ಗ್ರಾಮೀಣ, ಪಟ್ಟಣ, ನಗರ ವ್ಯಾಪ್ತಿಯಲ್ಲಿ ಯಶಸ್ವಿ ಉದ್ಯಮಿಯಾಗಿ ಉದ್ಯೋಗದಾತರಾಗಿದ್ದರು ಎಂದರು. ಸಂಘದ ಕೋಶಾಧಿಕಾರಿ ವಿಜೀತ್ ಶೆಟ್ಟಿ, ಪ್ರಮುಖರಾದ ದಯಾನಂದ ಶೆಟ್ಟಿ ಕಲ್ಮಂಜೆ, ಗೋಪಾಲ ಶೆಟ್ಟಿ ಮೊದಲಾದವರು ನುಡಿ ನಮನ ಸಲ್ಲಿಸಿ ಪುಷ್ಪಾಂಜಲಿ ಸಮರ್ಪಿಸಿದರು.



ಈ ಸಂದರ್ಭ ಬಹರೈನ್ ಔಮಾ ಮಿಡ್ಲ್ ಈಸ್ಟ್ ಸಂಸ್ಥೆಯ ಎಂಡಿ ನವೀನ್ ಶೆಟ್ಟಿ ದೆಂದೂರುಕಟ್ಟೆ, ಭಾರತಿ ಸಾಫ್ಟ್ ವೇರ್ ನ ಎಂಡಿ ಕಿರಣ್ ನಾಯಕ್, ಪ್ರಮುಖರಾದ ರಂಜಿನಿ ಹೆಗ್ಡೆ, ಪದ್ಮನಾಭ ಹೆಗ್ಡೆ, ಗೋಪಾಲ ಶೆಟ್ಟಿ, ದಯಾನಂದ ಶೆಟ್ಟಿ, ರಮೇಶ್ ಶೆಟ್ಟಿ ನಿಜೂಂರು, ಹರೀಂದ್ರ ಹೆಗ್ಡೆ, ಭಾಸ್ಕರ ಶೆಟ್ಟಿ, ಯತಿರಾಜ್, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.

























































































































