
ಆಳ್ವಾಸ್ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ ಅಟಲ್ ಪ್ರಾಯೋಜಿತ ‘ಡಿಜಿಟಲ್ ಫಾರೆನ್ಸಿಕ್ಸ್ ಇನ್ ಸೈಬರ್ ಸೆಕ್ಯುರಿಟಿ’ ವಿಷಯದಡಿ ಆರು ದಿನಗಳ ಆನ್ಲೈನ್ ಬೋಧಕ ವರ್ಗದ ಕೌಶಲ್ಯಾಭಿವೃದ್ಧಿ ಶಿಬಿರ ನಡೆಯಿತು. ಡೆಲ್ಟಾ ಎಕ್ಸಚೇಂಜ್ ಸಂಸ್ಥೆಯ ವೆಂಕಟೇಶ್ ಎಲ್ ಶರ್ಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸೈಬರ್ ಭದ್ರತಾ ತಜ್ಞ ಡಾ. ಮನೋಜ್ ವಿ.ಎನ್, ಅಗಮ್ಯ ಸೈಬರ್ ಟೆಕ್ನ ಮಹೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಜಿಟಲ್ ಫಾರೆನ್ಸಿಕ್ಸ್, ಸೈಬರ್ ಅಪರಾಧ ತನಿಖೆ, ಡೇಟಾ ಮರು ಪಡೆಯುವ ತಂತ್ರಜ್ಞಾನ, ಸೈಬರ್ ಕಾನೂನು, ಎಥಿಕಲ್ ಹ್ಯಾಕಿಂಗ್ ಮತ್ತು ಸೈಬರ್ ಭದ್ರತಾ ವಿಧಾನಗಳ ಕುರಿತು ತಾಂತ್ರಿಕ ಅಧಿವೇಶನಗಳು ನಡೆದವು.

ರಿ ಇನ್ಫೋಸೆಕ್ನ ಸಮರ್ಥ್ ಬಿ ಭಟ್, ಭರತ್ ಕುಮಾರ್ ಎನ್, ವೆಂಕಟೇಶ್ ಎಲ್. ಶರ್ಮಾ, ಸೈಸೆಕ್ನ ಶಿವಲಿಂಗ ಸಾಲಕ್ಕಿ, ಮಹೇಶ್, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೌಶಿಕ್ ಜಿ.ಎನ್, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ಮಂಜುನಾಥ್ ಕೊಠಾರಿ ಹಾಗೂ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಸ್ಲಂ ಬಿ. ನಂದ್ಯಾಲ್ ಸೆಷನ್ಗಳನ್ನು ನಡೆಸಿಕೊಟ್ಟರು. ಸಮಾರೋಪ ಸಮಾರಂಭದಲ್ಲಿ ನಿಟ್ಟೆಯ ಪ್ರೊಫೆಸರ್ ಡಾ. ವಾಸುದೇವ ಆಚಾರ್ ಹಾಗೂ ಗೌರವ ಅತಿಥಿಯಾಗಿ ಸಮರ್ಥ್ ಭಟ್ ಭಾಗವಹಿಸಿದರು. ದೇಶದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಒಟ್ಟು ೨೪೬ ಉಪನ್ಯಾಸಕರು ಪಾಲ್ಗೊಂಡರು.
























































































































