
ಮುಂಡ್ಕೂರು ಭಾರ್ಗವ ಜೆಸಿಐ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಪ್ರಕ್ರಿಯೆ ಮತ್ತು ಪದಗ್ರಹಣ ಸಮಾರಂಭದಲ್ಲಿ 2026 ರ ಸಾಲಿನ ಅಧ್ಯಕ್ಷೆಯಾಗಿ ಮುಂಡ್ಕೂರು ಅಂಗಡಿಗುತ್ತು ಸಮೀಪದ ಪ್ರಾಪ್ತಿ ಪ್ರಭಾಕರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಈಕೆ ಹಲವಾರು ವರ್ಷಗಳಿಂದ ಮುಂಡ್ಕೂರು ಪರಿಸರದಲ್ಲಿ ಹಲವಾರು ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು ಜನಾನುರಾಗಿದ್ದರು. ಈಕೆ ಮುಂಡ್ಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಂಗಾರು ಗದ್ದೆ ಪ್ರಭಾಕರ ವಾಸು ಶೆಟ್ಟಿ ಅವರ ಮತ್ತು ಪಂಜನಲ್ಲೆ ಗುತ್ತು ಪೂರ್ಣಿಮಾ ಶೆಟ್ಟಿಯವರ ದಂಪತಿಯ ಪುತ್ರಿ.























































































































