
ಭಾರತೀಯ ಮಾಸ್ಟರ್ಸ್ ವೇಟ್ಲಿಫ್ಟಿಂಗ್ ತಂಡವು ಉದಯ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಜನವರಿ 30 ರಿಂದ ಫೆಬ್ರವರಿ 1ರವರೆಗೆ ಜರ್ಮನಿಯಲ್ಲಿ ನಡೆದ ಓಪನ್ ವರ್ಲ್ಡ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿ 3 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ತನ್ನದಾಗಿಸಿ ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ತಂಡವು ಹೆಚ್ಚಿನ ಆತ್ಮವಿಶ್ವಾಸದಿಂದ ಚಾಂಪಿಯನ್ ಶಿಪ್ಗೆ ಪ್ರವೇಶಿಸಿತ್ತು.

ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಇಂಡಿಯನ್ ಮಾಸ್ಟರ್ಸ್ ಫೆಡರೇಶನ್ನ ಅಧ್ಯಕ್ಷ, ಮಾಜಿ ರಾಷ್ಟ್ರೀಯ ಚಾಂಪಿಯನ್, ಅಂತರರಾಷ್ಟ್ರೀಯ ರೆಫರಿ, ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಮತ್ತು ಇಂಡಿಯನ್ ಮಾಸ್ಟರ್ಸ್ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿಯಾದ ಉದಯ್ ಎಸ್ ಶೆಟ್ಟಿ ನೇತೃತ್ವದಲ್ಲಿ ಭಾಗವಹಿಸಿದ್ದ 9 ಸದಸ್ಯರೂ ಕೂಡಾ ಪದಕ ಗೆದ್ದದ್ದು ವಿಶೇಷ. ಕ್ರೀಡಾ ಮಂತ್ರಿ ಡಾ. ಮನ್ಸುಖ್ ಲಕ್ಷ್ಮಣಭಾಯ್ ಮಾಂಡವಿಯಾ ಗೆದ್ದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.





















































































































