
ಪಾವೂರು ಬಂಟರ ಸಂಘದ ಆಶ್ರಯದಲ್ಲಿ ನಡೆದ ಹಗ್ಗ ಜಗ್ಗಾಟ ಸ್ಫರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳೆಯರ ತಂಡ 490 ಕೆ.ಜಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಹಾಗೂ ಮುಕ್ತ ವಿಭಾಗದಲ್ಲೂ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ಕೆ.ಜಿ ವಿಭಾಗದಲ್ಲಿ ಬೆಸ್ಟ್ ಲಾಕರ್ ಪ್ರಶಸ್ತಿಯನ್ನು ಚಂದ್ರಕಲಾ ಶೆಟ್ಟಿ, ಮುಕ್ತ ವಿಭಾಗದಲ್ಲಿ ಬೆಸ್ಟ್ ಲಾಕರ್ ಪ್ರಶಸ್ತಿಯನ್ನು ಪ್ರವ್ಯ ಹೆಗ್ಡೆ ಹಾಗೂ ಬೆಸ್ಟ್ ಓಲ್ಡರ್ ಪ್ರಶಸ್ತಿಯನ್ನು ತಂಡದ ನಾಯಕಿ ಬಬಿತಾ ಶೆಟ್ಟಿ ಪಡೆದರು. ತರಬೇತುದಾರರಾದ ಆದರ್ಶ್ ಶೆಟ್ಟಿ, ನವೀಶ್ ಶೆಟ್ಟಿ ಪಡ್ರೆ, ನಿನಾದ್ ಜಯರಾಮ ಶೆಟ್ಟಿ, ರೋಹಿತ್ ಶೆಟ್ಟಿ ಉಪಸ್ಥಿತರಿದ್ದರು.























































































































