
ಸವಣೂರು ಯುವಕ ಮಂಡಲದ ಮಾರ್ಗದರ್ಶಕ, ಸವಣೂರು ಗ್ರಾ. ಪಂ. ಸದಸ್ಯ ಗಿರಿಶಂಕರ ಸುಲಾಯ ಅವರು 2026 ನೇ ಸಾಲಿನಿ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ವಿಜಯಪುರ ಜಿಲ್ಲಾ ಘಟಕ, ಮುದ್ದೇಬಿಹಾಳ ವಿ.ಬಿ.ಸಿ. ಪ್ರೌಢಶಾಲೆಯ ಮೈದಾನದಲ್ಲಿ ಜ. 31 ರಂದು ನಡೆಯಲಿರುವ ರಾಷ್ಟೀಯ ಯುವ ವೈಭವ 2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಮುಖ್ಯ ಶಿಕ್ಷಕರಾಗಿ ಸ್ವಯಂ ನಿವೃತ್ತಿ ಪಡೆದಿರುವ ಗಿರಿಶಂಕರ ಸುಲಾಯ ಸವಣೂರು ಗ್ರಾಮ ಪಂಚಾಯಿತಿಯ ಸದಸ್ಯರಾಗಿ ರಾಜ್ಯದಲ್ಲಿ ಅತೀ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಧಾರ್ಮಿಕ ಸಾಮಾಜಿಕ ರಂಗದಲ್ಲಿ ಸಕ್ರಿಯರಾಗಿರುವ ಗಿರಿಶಂಕರ ಸುಲಾಯ ಅವರು ಸವಣೂರು ಕಾಣಿಯೂರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರು, ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪಾಡಿ ಇದರ ಅಧ್ಯಕ್ಷರಾಗಿ, ಧಾರ್ಮಿಕ ಶಿಕ್ಷಣ ಸಮಿತಿಯ ತಾಲೂಕು ಸಮಿತಿ ಪ್ರಮುಖರಾಗಿ, ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಪ್ರಶಿಕ್ಷಣ, ಪ್ರ ಕೋಷ್ಠದ ಸಂಚಾಲಕರಾಗಿ, ಶ್ರೀ ದುರ್ಗಾ ಭಜನಾ ಮಂಡಳಿ ಪಾದೆಬಂಬಿಲ, ಶ್ರೀ ಹರಿಭಜನಾ ಮಂಡಳಿ ದೇವಸ್ಯ ಇದರ ಗೌರವಾಧ್ಯಕ್ಷರಾಗಿ, ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಯಾಗಿ, ಶ್ರೀ ಧ, ಗ್ರಾಂ, ಯೋ. ಕೆರೆ ಅಭಿವೃದ್ಧಿ ಸಮಿತಿ ಸವಣೂರು ಅಧ್ಯಕ್ಷರಾಗಿ, ಜನ ಜಾಗೃತಿ ವೇದಿಕೆ ಕಡಬ ತಾಲೂಕು ಸದಸ್ಯರಾಗಿ, ಪುಣ್ಚಪಾಡಿ ಶಾಲೆ ಸೌಕರ್ಯ ಸಮಿತಿ ಸದಸ್ಯರಾಗಿ, ಪುಣ್ಚಪಾಡಿ ಅಂಗನವಾಡಿ ಸೌಕರ್ಯ ಸಮಿತಿ ಸದಸ್ಯರಾಗಿ, ಕುಮಾರಮಂಗಲ ಶಾಲೆ ಸೌಕರ್ಯ ಸಮಿತಿ ಸದಸ್ಯರಾಗಿ, ಕುಮಾರಮಂಗಲ ಅಂಗನವಾಡಿ ಸೌಕರ್ಯ ಸಮಿತಿ ಸದಸ್ಯರಾಗಿ, ಸವಣೂರು ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾಗಿ, ಪುಣ್ಚಪಾಡಿ ಶಾಲಾ ಶತಮಾನೋತ್ಸವ ಸಮೀತಿ ಸದಸ್ಯರಾಗಿ, ಸವಣೂರು ಕಾಲೇಜು ಹಿರಿಯ ವಿದ್ಯಾರ್ಥಿ ಸಂಘ ಸದಸ್ಯರಾಗಿ, ಪ್ರಗತಿ ವಿದ್ಯಾಸಂಸ್ಥೆಗಳು ಕಾಣಿಯೂರು ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾಗಿ, ಸವಣೂರು ಪ್ರಾರ್ಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿಯಾಗಿ, ಶ್ರೀ ಭಾರತಿ ಶಾಲೆ ಅಲಂಕಾರು ಇದರ ಶೈಕ್ಷಣಿಕ ಪರೀವೀಕ್ಷಕ, RSS ಸ್ವಯಂಸೇವಕ, ಗಣೇಶೋತ್ಸವ ಸಮಿತಿ ಪುಣ್ಚಪಾಡಿ ಗೌರವಾಧ್ಯಕ್ಷರು, ಶಾರದೋತ್ಸವ ಸಮಿತಿ ಸವಣೂರು ಸದಸ್ಯ, ಸಾಮರಸ್ಯ ವೇದಿಕೆ ಪುತ್ತೂರು ಸದಸ್ಯ, ಬೊಳ್ಳಿ ಬೊಲ್ಪು ತುಳುಕೂಟ ಸವಣೂರು ಗೌರವಾಧ್ಯಕ್ಷರು, ಶ್ರೀ ಉಳ್ಳಾಕುಲು ಸೇವಾ ಸಮಿತಿ ಪುಣ್ಚಪಾಡಿ ಕಾರ್ಯದರ್ಶಿಯಾಗಿ, ಶ್ರೀ ಆದಿ ನಾಗಬ್ರಹ್ಮ ಮುಗೇರ್ಕಳ ಸೇವಾ ಸಮಿತಿ ಪುಣ್ಚಪಾಡಿ ಗೌರವಾಧ್ಯಕ್ಷರು, ಸೋಂಪಾಡಿ ಮಾರಿಯಮ್ಮ ದೇವಸ್ಥಾನ ಗೌರವಾಧ್ಯಕ್ಷರು, ರೋಟರಿ ಸಮುದಾಯದಳ ಅಧ್ಯಕ್ಷರು, ಹಿಂದೂ ಜಾಗರಣ ವೇದಿಕೆ ಸವಣೂರು ಗೌರವಾಧ್ಯಕ್ಷರಾಗಿ, ಕಣ್ವರ್ಷಿ ಸಾಂಸ್ಕೃತಿಕ ಕಲಾಕೇಂದ್ರ ಕಾಣಿಯೂರು ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.





















































































































