
ಕರ್ನಾಟಕ ರಕ್ಷಣಾ ವೇದಿಕೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ (ಉತ್ತರ ಬೆಂಗಳೂರು) ಉದ್ದಿಮೆದಾರರ ಘಟಕದ ಅಧ್ಯಕ್ಷರಾಗಿ ಕೈಗಾರಿಕೋದ್ಯಮಿ, ಸಮಾಜಸೇವಕ ಡಾ| ಜೆ.ಕೆ ಶೆಟ್ಟಿಯವರು ನಿಯುಕ್ತಿಗೊಂಡಿದ್ದಾರೆ. ಪ್ರವೀಣ್ ಕುಮಾರ್ ಶೆಟ್ಟಿಯವರು ವೇದಿಕೆಯ ನಾಯಕರಾಗಿದ್ದು, ಕನ್ನಡ ಭಾಷೆ ಮತ್ತು ಕರ್ನಾಟಕದ ಹಿತಾಸಕ್ತಿಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕನ್ನಡಿಗರ ಉದ್ಯೋಗ, ಗಡಿ ಭಾಗಗಳ ಸಮಸ್ಯೆಗಳು, ಕನ್ನಡ ಜಾಹೀರಾತುಗಳು ಮತ್ತು ಕನ್ನಡ ಶಾಲೆಗಳ ಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದಾರೆ.



















































































































