ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಆಶ್ರಯದಲ್ಲಿ ಬಂಟ್ಸ್ ಒಲಂಪಿಕ್ಸ್ ಮತ್ತು ವಾರ್ಷಿಕ ಕ್ರೀಡಾಕೂಟವು ಡಿ 25 ರಂದು ನಗರದ ಮದನ್ ಲಾಲ್ ಡಿಂಗ್ರಾ ಮೈದಾನದಲ್ಲಿ ಜರಗಿತು. ಜಗದೀಶ್ ಶೆಟ್ಟಿ ನೇತೃತ್ವದಲ್ಲಿ ಕ್ರೀಡಾ ಕಾರ್ಯಾಧ್ಯಕ್ಷ ಜಯ ಶೆಟ್ಟಿ ರೆಂಜಾಳ, ಯುವ ವಿಭಾಗದ ಕಾರ್ಯಾಧ್ಯಕ್ಷ ಶುಭಂ ಶೆಟ್ಟಿ, ಆಕಾಶ್ ಶೆಟ್ಟಿಯವರ ಮುಂದಾಳತ್ವದಲ್ಲಿ ಪುಣೆ ಪರಿಸರದ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್, ಬಂಟರ ಸಂಘ ಪುಣೆ ಮತ್ತು ಬಂಟ್ಸ್ ಅಸೋಸಿಯೇಷನ್ ಮೂರು ಬಂಟರ ಸಂಘಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ಬಂಟ್ಸ್ ಒಲಂಪಿಕ್ಸ್ ನಲ್ಲಿ ಬಾಕ್ಸ್ ಕ್ರಿಕೆಟ್, ಫುಲ್ ಪಿಚ್ ಕ್ರಿಕೆಟ್, ಬ್ಯಾಡ್ಮಿಂಟನ್, ಚೆಸ್, ಕ್ಯಾರಂ, ಪುಟ್ಬಾಲ್, ಲಗೋರಿ, ದೊಡ್ಜಬಾಲ್, ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಮೊದಲಾದ ಆಟೋಟ ಸ್ಪರ್ದೆಗಳು ನಡೆದವು. ವಿವಿಧ ದಿನಗಳಲ್ಲಿ ವಿವಿಧ ಸ್ಪರ್ದೆಗಳು ವಿವಿಧ ಕ್ರೀಡಾಂಗಣದಲ್ಲಿ ಸ್ಪರ್ದೆಗಳು ನಡೆದು ಕ್ರೀಡಾ ಕೂಟದ ಸಮಾರೋಪವು 25ರಂದು ಜರಗಿತು. ಈ ಸಂದರ್ಭದಲ್ಲಿ ಬಂಟ್ಸ್ ಒಲಂಪಿಕ್ ನ ಫೈನಲ್ ಪಂದ್ಯಾಟಗಳು ಬಹಳ ಜಿದ್ದಾಜಿದ್ದಿನ ಸ್ಪರ್ದೆಯೊಂದಿಗೆ ನಡೆಯಿತು. ಫುಲ್ ಪಿಚ್ ಕ್ರಿಕೆಟ್ ನಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ಪ್ರಥಮ, ಬಂಟ್ಸ್ ಅಸೋಸಿಯೇಷನ್ ಪುಣೆ ದ್ವಿತೀಯ, ಬಾಕ್ಸ್ ಕ್ರಿಕೆಟ್ ನಲ್ಲಿ ಪುರುಷರ ವಿಭಾದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ಪ್ರಥಮ, ಬಂಟರ ಸಂಘ ಪುಣೆ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಪುಣೆ ಬಂಟರ ಸಂಘ ಪ್ರಥಮ ಮತ್ತು ದ್ವಿತೀಯ, ವಾಲಿಬಾಲ್ ನಲ್ಲಿ ಪುಣೆ ಬಂಟರ ಸಂಘ ಪ್ರಥಮ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ದ್ವಿತೀಯ, ಮಹಿಳೆಯರ ಥ್ರೋಬಾಲ್ ನಲ್ಲಿ ಪುಣೆ ಬಂಟರ ಸಂಘ ಪ್ರಥಮ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ದ್ವಿತೀಯ, ಕಬಡ್ಡಿಯಲ್ಲಿ ಬಂಟ್ಸ್ ಅಸೋಸಿಯೇಷನ್ ಪ್ರಥಮ, ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ದ್ವಿತೀಯ, ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಪುಣೆ ಬಂಟರ ಸಂಘ ಪ್ರಥಮ, ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಪುಣೆ ಬಂಟರ ಸಂಘ ಪ್ರಥಮ, ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ದ್ವಿತೀಯ ಸ್ಥಾನವನ್ನು ಪಡೆದವು. ಈ ಎಲ್ಲಾ ಪಂದ್ಯಾಟಗಳಿಗೆ ಅಂಕಗಳನ್ನು ನೀಡಲಾಗಿದ್ದು, ಅತಿ ಹೆಚ್ಚು ಅಂಕ ಪಡೆದ ಪುಣೆ ಬಂಟರ ಸಂಘವು ಸಮಗ್ರ ತಂಡವಾಗಿ ಬಂಟ್ಸ್ ಒಲಂಪಿಕ್ ಟ್ರೋಪಿಯನ್ನು ಪಡೆಯಿತು. ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಎರಡನೇ ಸ್ಥಾನವನ್ನು ಪಡೆಯಿತು.

ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ಜಗದೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು ಗೌರವ ಅತಿಥಿಗಳಾದ ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು, ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ, ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ಸೀತಾರಾಮ್ ಶೆಟ್ಟಿ ಎರ್ಮಾಳ್ , ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್, ಪ್ರ .ಕಾರ್ಯದರ್ಶಿ ರವಿ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಶೆಟ್ಟಿ ಉಜಿರೆ, ಕ್ರೀಡಾ ಕಾರ್ಯಾಧ್ಯಕ್ಷ ಜಯ ಶೆಟ್ಟಿ ರೆಂಜಾಳ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ್ ಶೆಟ್ಟಿ ಪೆಲತ್ತೂರು, ಬಾಲಚಂದ್ರ ಶೆಟ್ಟಿ ಎರ್ಮಾಲ್, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷೆ ಶೋಭಾ ಜೆ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶುಭಂ ಶೆಟ್ಟಿ ಕಾರ್ಯಾಧ್ಯಕ್ಷೆ ಅನ್ವಿತಾ ಶೆಟ್ಟಿಯವರ ಸಮ್ಮುಖದಲ್ಲಿ ವಿಜೇತ ಪುಣೆ ಬಂಟರ ಸಂಘಕ್ಕೆ ಚಾಂಪಿಯನ್ ಟ್ರೋಪಿಯನ್ನು ನೀಡಿ ಗೌರವಿಸಲಾಯಿತು. ವೈಯುಕ್ತಿಕ ವಿಭಾಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು ಹಾಗೂ ವೈಯುಕ್ತಿಕ ವಿಭಾಗದಲ್ಲಿ ವಾರ್ಷಿಕ ಶ್ರೇಷ್ಠ ಕ್ರೀಡಾ ಪಟುವಾಗಿ ಪುರುಷರ ವಿಭಾಗದ ಪ್ರಶಸ್ತಿಯನ್ನು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಸಂದೇಶ್ ಶೆಟ್ಟಿ ಮತ್ತು ವಾರ್ಷಿಕ ಕ್ರೀಡಾ ಪಟು ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಪುಣೆ ಬಂಟರ ಸಂಘದ ನಯನ ಶೆಟ್ಟಿ ಮತ್ತು ಸಾನ್ವಿ ಶೆಟ್ಟಿ ಜಂಟಿಯಾಗಿ ಪಡೆದರು. ಈ ಕ್ರೀಡಾಕೂಟದ ಎಲ್ಲಾ ಆಯೋಜನೆಯು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಆಯೋಜನೆಯಲ್ಲಿ ಶಿಸ್ತುಬದ್ದವಾಗಿ ನಡೆದವು. ಸುಧಾಕರ್ ಶೆಟ್ಟಿ ಪೆಲತ್ತೂರು ಮತ್ತು ಅವಿನಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡುಬಿದಿರೆ

















































































































