
ಪಡುಬಿದ್ರಿ ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್ ನಿರ್ಮಾಣ ಜೀರ್ಣೋದ್ದಾರ ಪುಣೆ ಸೇವಾ ಸಮಿತಿಯ ಸಮಾಲೋಚನಾ ಸಭೆಯು ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ಜನವರಿ 3 ಶನಿವಾರದಂದು ಬೆಳಿಗ್ಗೆ ಗಂಟೆ 11.30ಕ್ಕೆ ಪುಣೆ ಬಂಟರ ಭವನ ಬಾಣೇರ್ ನಲ್ಲಿ ಜರಗಲಿದೆ. ಈ ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರದ ಸಂಕಲ್ಪವನ್ನು ಮಾಡಿ, ಧಾರ್ಮಿಕ ಕಾರ್ಯವನ್ನು ಕೈಗೆತ್ತಿಕೊಂಡು ಘನ ಕಾರ್ಯದ ನೇತೃತ್ವ ವಹಿಸಿಕೊಂಡ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ| ಕೆ ಪ್ರಕಾಶ್ ಶೆಟ್ಟಿ, ಅನುವಂಶಿಕ ಮೊಕ್ತೇಸರರಾದ ಭವಾನಿ ಶಂಕರ ಹೆಗ್ಡೆ, ಮುಂಬಯಿ ಸಮಿತಿ ಅಧ್ಯಕ್ಷರಾದ ಮಹೇಶ್ ಶೆಟ್ಟಿ, ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರಿ, ಸುರೇಶ್ ಶೆಟ್ಟಿ ಪಡುಬಿದ್ರಿ, ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಮಾಜಿ ಅಧ್ಯಕ್ಷರುಗಳಾದ ಕುಶಲ್ ಹೆಗ್ಡೆ, ಸದಾನಂದ ಕೆ ಶೆಟ್ಟಿ, ಜಯಂತ್ ಶೆಟ್ಟಿ, ಬಂಟರ ಸಂಘದ ಟ್ರಸ್ಟಿಗಳಾದ ಜಿತೇಂದ್ರ ಹೆಗ್ಡೆ, ಕೆ.ಕೆ ಶೆಟ್ಟಿ, ಸಮಿತಿ ಪದಾಧಿಕಾರಿಗಳಾದ ವಿಶ್ವನಾಥ್ ಶೆಟ್ಟಿ ಶೀತಲ್, ರಾಮಕೃಷ್ಣ ಶೆಟ್ಟಿ, ಸುಧೀರ್ ಶೆಟ್ಟಿ ಕಣಂಜಾರು, ಚಂದ್ರಹಾಸ್ ಶೆಟ್ಟಿ ಎರ್ಮಾಳ್, ಗಣೇಶ್ ಹೆಗ್ಡೆ ಪುಣ್ಚೂರ್, ಮಾಧವ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು, ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ್ ವಿ ಶೆಟ್ಟಿ, ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ರಾಕೇಶ್ ಶೆಟ್ಟಿ ಬೆಳ್ಳಾರೆ, ಉದ್ಯಮಿಗಳಾದ ಬಾಲಚಂದ್ರ ಶೆಟ್ಟ ಎರ್ಮಾಳ್, ಆನಂದ್ ಶೆಟ್ಟಿ ಮಿಯ್ಯಾರ್, ಸುಂದರ್ ಪೂಜಾರಿ, ಕೈಗಾರಿಕೋದ್ಯಮಿ ಸದಾಶಿವ ಬಂಜನ್, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುಬಾಶ್ ಶೆಟ್ಟಿ, ಪುಣೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಸುಲತಾ ಎಸ್ ಶೆಟ್ಟಿ, ಜಯಂತಿ ಜೆ ಶೆಟ್ಟಿ, ಪುಷ್ಪ ಕೆ ಹೆಗ್ಡೆ, ಶೋಭಾ ಜೆ ಶೆಟ್ಟಿ, ಶಶಿ ಬಿ ಹೆಗ್ಡೆ, ಸಂಧ್ಯಾ ವಿ ಶೆಟ್ಟಿ, ಪುಣೆ ಕುಲಾಲ ಸಂಘದ ಅಧ್ಯಕ್ಷ ದೊಡ್ಡಣ್ಣ ಮೂಲ್ಯ, ದೇವಾಡಿಗ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗರವರು ಉಪಸ್ಥಿತರಿರುವರು.

ಧಾರ್ಮಿಕ, ಸಾಂಸ್ಕ್ರತಿಕವಾಗಿ ಸಂಪನ್ನ ನೆಲೆಯಾದ ಬಹು ದೇವತಾ ಆರಾಧನಾ ಕ್ಷೇತ್ರ, ಪುರಾತನ ಪೂಜಾನೀಯ ಪ್ರಸಿದ್ದ ಪಡುಬಿದ್ರಿ ಸೀಮೆಯ ಉಳ್ಳಾಯ ಎಂದೇ ಖ್ಯಾತಿ ಪಡೆದ ‘ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ’ ಅಸಂಖ್ಯಾತ ಭಕ್ತರನ್ನು ತಲೆ ತಲೆಮಾರುಗಳಿಂದ ಅಶಿರ್ವದಿಸಿದ ಪವಿತ್ರ ಪುಣ್ಯ ಕ್ಷೇತ್ರವಿದು. ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಜೀರ್ಣೋದ್ದಾರವು ಸ್ಫೂರ್ತಿದಾಯಕ ವ್ಯಕ್ತಿತ್ವ, ಆಶಾದಾಯಕ ಹೃದಯ ವೈಶಾಲ್ಯ ನಾಯಕತ್ವ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರಕ ಡಾ| ಕೆ. ಪ್ರಕಾಶ್ ಶೆಟ್ಟಿಯವರ ಘನ ನೇತೃತ್ವದಲ್ಲಿ ಹಾಗೂ ಅನುವಂಶಿಕ ಮೊಕ್ತೇಸರರು, ದೇವಾಲಯದ ಜೀರ್ಣೋದ್ಧಾರ ಸಮಿತಿ, ಕಾರ್ಯಕಾರಿ ಸಮಿತಿ ಮತ್ತು ಜೀರ್ಣೋದ್ದಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸೇವಾ ಕರ್ತರು ಮತ್ತು ಭಕ್ತರ ಒಡಂಬಡಿಕೆಯೊಂದಿಗೆ ಕ್ಷೇತ್ರದ ಸ್ಥಳ ಅಭಿವೃದ್ದಿಯ ಯೋಜನೆಗಳ ಜೊತೆಯಲ್ಲಿ ಸ್ಥಳ ಪ್ರಶ್ನಾ ಸಂಕಲ್ಪದಂತೆ ದೇವಾಲಯವನ್ನು ಆಧ್ಯಾತ್ಮಿಕ ನೆಲೆಯೊಂದಿಗೆ ನವ ವೈಭವಕ್ಕೆ ಪುನಃ ಸ್ಥಾಪಿಸಲು ಮತ್ತು ಎಲ್ಲಾ ಭಕ್ತರ ಸುರಕ್ಷತೆಗೆ ಮೂಲ ಸೌಕರ್ಯಗಳೊಂದಿಗೆ ಸಂಪೂರ್ಣ ಜೀರ್ಣೋದ್ದಾರದ ಸಂಕಲ್ಪವನ್ನು ಕೈಗೆತ್ತಿಕೊಂಡಿರುವ ವಿಚಾರ ತಮೆಗೆಲ್ಲಾ ತಿಳಿದುದಾಗಿದೆ. ಭಕ್ತರ ಸನ್ಮಂಗಲಕ್ಕಾಗಿ ಜೀರ್ಣೋದ್ದಾರ ಸಮಿತಿ ಪ್ರಮುಖರಾಗಿ ಡಾ| ಪ್ರಕಾಶ್ ಶೆಟ್ಟಿ ಮತ್ತು ಆಶಾ ಪ್ರಕಾಶ್ ಶೆಟ್ಟಿಯವರ ಬಹು ದಿನದ ಕನಸಾದ ದೇವಸ್ಥಾನದ ಜೀರ್ಣೋದ್ದಾರ ಮತ್ತು ಮುಂದೆ ನಡೆಯಲಿರುವ ಅಷ್ಠಬಂಧ ಬ್ರಹ್ಮಕಲಶೋತ್ಸವದಂದು ಭಗವಂತನ ಪುನಃ ಪ್ರತಿಷ್ಠೆಗೊಳ್ಳಲಿರುವ ಅ ಕ್ಷಣ ಭಗವದ್ಭಕ್ತರಿಗೆ ಅವಿಷ್ಮರಣಿಯ ದಿನವಾಗಲಿದೆ. ನಮ್ಮ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯ ಮೇಲಿನ ಪ್ರೀತಿ, ಭವಿಷ್ಯದ ಪೀಳಿಗೆಗಳ ಶಾಂತಿ, ಸ್ಫೂರ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಕಾಪಾಡುವ ಪವಿತ್ರ ಪರಂಪರೆಯನ್ನು ಸಂರಕ್ಷಿಸುದರೊಂದಿಗೆ, ಸಮುದಾಯದ ಒಗ್ಗಟ್ಟು ಮತ್ತು ಸನಾತನ ಹಿಂದೂ ಧರ್ಮದ ಸಂರಕ್ಷಣೆ ಮಹತ್ತರವಾದ ಈ ಯೋಜನೆಯು ತನ್ನ ಜೀವಮಾನದ ಪವಿತ್ರ ಕಾರ್ಯವೆಂಬುದೇ ಡಾ| ಪ್ರಕಾಶ್ ಶೆಟ್ಟಿ ಮತ್ತು ಆಶಾ ಪ್ರಕಾಶ್ ಶೆಟ್ಟಿಯವರ ದ್ಯೆಯವಾಗಿದೆ. ಒಡೆಯನಿಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಕೆರೆಯ ನೀರನ್ನು ಕೆರೆಗೆ ಚೆಲ್ಲಿದರೆಂಬುವಂತೆ ಅವರ ಸಮರ್ಪಣಾ ಭಾವಕ್ಕೆ ಶರಣೆನ್ನೋಣ.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ, ಪುಣೆ

















































































































