ಕಾರ್ಕಳ ಜ್ಞಾನಸುಧಾದಲ್ಲಿ ಶ್ರದ್ಧಾಂಜಲಿ ಸಭೆ ಕಾರ್ಕಳದ ಪ್ರಸಿದ್ಧ ಲೆಕ್ಕಪರಿಶೋಧಕ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿಯಾಗಿರುವ ಸಿ.ಎ ನಿತ್ಯಾನಂದ ಪ್ರಭುರವರ ತಾಯಿ ಸುಮಿತ್ರಾ ಪ್ರಭು (87) ಅವರು ಆದಿತ್ಯವಾರದಂದು ದೈವಾಧೀನರಾದರು. ಕೆರ್ವಾಶೆಯಲ್ಲಿ ಜನಿಸಿದ ಇವರು ಅಜೆಕಾರ್ ಗುಂಡುರಾಯ ಪ್ರಭುರವನ್ನು ವರಿಸಿ ಅಂಗಡಿ ವ್ಯಾಪಾರದಲ್ಲಿ 40ವರ್ಷಗಳಿಂದ ತೊಡಗಿಸಿಕೊಂಡ ಇವರಿಗೆ ಓರ್ವ ಪುತ್ರನನ್ನು ಹಾಗೂ ಮೂವರು ಪುತ್ರಿಯರನ್ನು, 9 ಮೊಮ್ಮಕ್ಕಳನ್ನು ಹಾಗೂ ಒಂದು ಮರಿಮೊಮ್ಮಗುವನ್ನು ಅಗಲಿದ್ದಾರೆ. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕಾರ್ಕಳ ಜ್ಞಾನಸುಧಾದ ಮುಖ್ಯ ಸಭಾಂಗಣದಲ್ಲಿ ಅಗಲಿದ ದಿವ್ಯಚೇತನ ಸುಮಿತ್ರಾ ಪ್ರಭುರವರಿಗೆ ಸೋಮವಾರದಂದು ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಶ್ರೀಮತಿ ಉಷಾ ರಾವ್ ಯು, ಉದ್ಯಮಿ ತ್ರಿವಿಕ್ರಮ ಕಿಣಿ, ಸುಮಿತ್ರಾ ಅವರ ಮೊಮ್ಮಗ, ಸಂಸ್ಥೆಯ ಇಂಟರ್ನಲ್ ಅಡಿಟರ್ ಸಿ.ಎ ವಿಘ್ನೇಶ್ ಕಾಮತ್ ಅವರು ಪುಷ್ಪನಮನವನ್ನು ಸಲ್ಲಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀ ಮತಿ ಸಂಗೀತಾ ಕುಲಾಲ್ ನುಡಿನಮನ ಸಲ್ಲಿಸಿದರು.