ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇಲ್ಲಿ ಬರುವ 14-01-2026 ರಂದು ಮಕರ ಸಂಕ್ರಮಣ ದಿನ ಧ್ವಜಾರೋಹಣಗೊಂಡು 5 ದಿನ ನಡೆಯುವ ವರ್ಷಾವಧಿ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ ನಡೆಸಲು ಊರ ಭಗವದ್ಭಕ್ತರ ಸಭೆಯನ್ನು ಕರೆದು ಉತ್ಸವ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಮಾಜಿ ಸಚಿವ ರಮಾನಾಥ ರೈ ಕಳ್ಳಿಗೆ ಗುತ್ತು, ಅಧ್ಯಕ್ಷರಾಗಿ ಭವಿಷ್ ಶೆಟ್ಟಿ ಕೋಡಿಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ದೇವಂದಬೆಟ್ಟು, ಕೋಶಾಧಿಕಾರಿಯಾಗಿ
ನಾಗೇಶ್ ದರಿಬಾಗಿಲು ಉಳಿದಂತೆ ಗೌರವ ಸಲಹೆಗಾರರು, ಉಪಾಧ್ಯಕ್ಷರು, ಜತೆ ಕಾರ್ಯದರ್ಶಿಗಳು ಹಾಗೂ ಇತರ ಸಮಿತಿಯನ್ನು ರಚಿಸಲಾಯಿತು.