ಲೈವ್ ಕಿಚನ್ ಹಾಗೂ ಲೈವ್ ಕೇಕ್ ಗಳಿಗೆ ಸೆವೆನ್ತ್ ಹೆವೆನ್ ಪ್ರಸಿದ್ದಿಯಾಗಿದ್ದು, ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸೇವೆ, ಸಭೆ ಸಮಾರಂಭಗಳಲ್ಲಿ ಅವಶ್ಯಕತೆಗೆ ತಕ್ಕಷ್ಟು ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ತಲುಪಿಸುವ ಸೇವಾ ತತ್ಪರತೆಗಳಿಂದ ಇಂದು ಸೆವೆನ್ತ್ ಹೆವೆನ್ ಬೇಕರಿ ಹಬ್ ಗಳು ರಾಜ್ಯಾದ್ಯಂತ ಹಾಗೂ ದೇಶದಾದ್ಯಂತ ಮನೆ ಮಾತಾಗಿದೆ. 3D ಕೇಕ್, ಕಪ್ ಕೇಕ್, ಮೆಕರೋನ್ಸ್, ಡೋನಟ್ಸ್, ಟಾರ್ಟ್ಸ್, ಬ್ರೌನಿಸ್, ಚೀಸ್ ಕೇಕ್ಸ್ ಹಾಗೂ ಇನ್ನಿತರ ಸಂಪೂರ್ಣ ಶಾಖಾಹಾರಿ ವೈವಿಧ್ಯಮಯ ಉತ್ಪನ್ನಗಳು ಟೀಮ್ ವರ್ಕ್ ಮುಖಾಂತರ ಗ್ರಾಹಕರ ಮನೆಗೆ ತಲುಪುವ ಬೇಕ್ ಡ್ ಖಾದ್ಯ ಪದಾರ್ಥಗಳು ತನ್ನದೇ ಆದ ಬ್ರಾಂಡ್ ಗುರುತು ಹೊಂದಿದ್ದು, ಬೇಕರಿ ಉದ್ಯಮದಲ್ಲೇ ಸ್ಟಾಂಡರ್ಡ್ ಬೇಕರಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ದಿನೇ ದಿನೇ ಗ್ರಾಹಕರ ಬೇಡಿಕೆಯೂ ಹೆಚ್ಚುತ್ತಲೇ ಇರುವುದು ಸೆವೆನ್ತ್ ಹೆವೆನ್ ಬೇಕರಿ ಎಂಡ್ ಕೆಫೆ ವೈಶಿಷ್ಟ್ಯ. ಇಲ್ಲಿನ ಕೇಕ್ ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಇದ್ದು, ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸೆವೆನ್ತ್ ಹೆವೆನ್ ಉಡುಪಿ ಶಾಖೆಯು ಅಕ್ಟೋಬರ್ 12 ರಂದು ಉಡುಪಿ ಬಸ್ ಸ್ಟಾಂಡ್ ಹತ್ತಿರ ಗ್ರಾಸ್ ಲ್ಯಾಂಡ್ ಕಮರ್ಷಿಯಲ್ ಬಿಲ್ಡಿಂಗ್ ಗೆ ಸ್ಥಳಾಂತರಗೊಂಡಿತು.

ಹೊಸ ಶಾಖೆಯನ್ನು ಮಾಲಕ, ಯುವ ಉದ್ಯಮಿ ಶಮಿತ್ ಶೆಟ್ಟಿಯವರ ಮಾತೃಶ್ರೀ ದೇವಕಿ ಅಪ್ಪು ಶೆಟ್ಟಿಯವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಅಶೋಕ್ ಶೆಟ್ಟಿ ಕೆಮ್ತೂರು, ಸುಧಾಕರ ಶೆಟ್ಟಿ ಶಿವಮೊಗ್ಗ, ಪ್ರಭಾಕರ ಶೆಟ್ಟಿ ಚಿಕ್ಕಮಗಳೂರು, ಸಂತೋಷ್ ಶೆಟ್ಟಿ ಉಡುಪಿ, ಕುಟುಂಬ ವರ್ಗದವರು ಹಾಗೂ ಹಿತೈಷಿಗಳು ಆಗಮಿಸಿದ್ದರು.