ಯುಎಇ ಬಂಟ್ಸ್ ವತಿಯಿಂದ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಪಂದ್ಯಾವಳಿಗಳು ಸೆಪ್ಟೆಂಬರ್ 21 ರಂದು ದುಬೈಯ ಅಲ್ ಇತಿಯಾದ್ ಪ್ರೈವೇಟ್ ಶಾಲೆ ಮಮ್ಜಾರ್ ನಲ್ಲಿ ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿ ಮತ್ತು ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ದೀಪವನ್ನು ಬೆಳಗಿಸುವ ಮೂಲಕ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಯುಎಇ ಬಂಟ್ಸ್ ನ ಪದಾಧಿಕಾರಿಗಳಾದ ಪ್ರೇಮನಾಥ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ರವಿರಾಜ್ ಶೆಟ್ಟಿ, ವಾಸು ಶೆಟ್ಟಿ, ಗುಣಶೀಲ್ ಶೆಟ್ಟಿ, ಕ್ರೀಡಾ ಕಾರ್ಯಕ್ರಮದ ಸಂಘಟಕರಾದ ಸುಪ್ರಜ್ ಶೆಟ್ಟಿ ಉಪಸ್ಥಿತರಿದ್ದರು.

ಬೆಳಿಗ್ಗೆಯಿಂದ ರಾತ್ರಿ ಎಂಟು ಗಂಟೆಯವರೆಗೆ ನಡೆದ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಹದಿನೈದು ವರ್ಷ ಒಳಗಿನ ಹೆಣ್ಮಕ್ಕಳ ಸಿಂಗಲ್ ಪಂದ್ಯಾಟದಲ್ಲಿ ಸಾಂಚಿ ದಯಾಕರ ಶೆಟ್ಟಿ ವಿನ್ನರ್, ಅನ್ನಿ ಶೆಟ್ಟಿ ರನ್ನರ್ ಅಪ್, ಗಂಡಸರ ಸಿಂಗಲ್ ಪಂದ್ಯಾಟದಲ್ಲಿ ಯತಾರ್ಥ್ ಶೆಟ್ಟಿ ವಿನ್ನರ್, ಆಯುಷ್ ಶೆಟ್ಟಿ ರನ್ನರ್ ಅಪ್, ಹದಿನೈದು ವರ್ಷದಿಂದ ಐವತ್ತು ವರ್ಷದ ಒಳಗಿನ ಹೆಂಗಸರ ಸಿಂಗಲ್ ಪಂದ್ಯಾಟದಲ್ಲಿ ನಿಶಕಾಂತಿ ಶೆಟ್ಟಿ ವಿನ್ನರ್, ಇಂದ್ರಕ್ಷೀತ ಶೆಟ್ಟಿ ರನ್ನರ್ ಅಪ್, ಗಂಡಸರ ಸಿಂಗಲ್ ಪಂದ್ಯಾಟದಲ್ಲಿ ಅಂಜನ್ ರೈ ವಿನ್ನರ್, ನೀಲೆಶ್ ಶೆಟ್ಟಿ ರನ್ನರ್ ಅಪ್, ಹದಿನೈದು ವರ್ಷದಿಂದ ಐವತ್ತು ವರ್ಷದ ಹೆಂಗಸರ ಡಬಲ್ ಪಂದ್ಯಾಟದಲ್ಲಿ ಸುಪ್ರೀತಾ ಶೆಟ್ಟಿ ಮತ್ತು ರಮ್ಯ ಶೆಟ್ಟಿ ವಿನ್ನರ್, ನಿಷೀತ ಹೆಗ್ಡೆ ಮತ್ತು ಆಶ್ಮೀತ ಶೆಟ್ಟಿ ರನ್ನರ್ ಅಪ್, ಗಂಡಸರ ಡಬಲ್ ಪಂದ್ಯಾಟದಲ್ಲಿ ಸುಶಾಂತ್ ಶೆಟ್ಟಿ ಮತ್ತು ಸುದೇಶ್ ಶೆಟ್ಟಿ ವಿನ್ನರ್, ಪ್ರಜ್ವಲ್ ಶೆಟ್ಟಿ ಮತ್ತು ಸೃಜನ್ ಶೆಟ್ಟಿ ರನ್ನರ್ ಅಪ್, ಐವತ್ತು ವರ್ಷದ ಮೇಲಿನ ಗಂಡಸರ ಸಿಂಗಲ್ ಪಂದ್ಯಾಟದಲ್ಲಿ ಗುಣಶೀಲ್ ಶೆಟ್ಟಿ ವಿನ್ನರ್, ಅಶ್ವಿನ್ ಶೆಟ್ಟಿ ರನ್ನರ್ ಅಪ್, ಐವತ್ತು ವರ್ಷದ ಮೇಲಿನ ಗಂಡಸರ ಡಬಲ್ ಪಂದ್ಯಾಟದಲ್ಲಿ ಗುಣಶೀಲ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ವಿನ್ನರ್, ಅನಿಲ್ ಹೆಗ್ಡೆ ಮತ್ತು ಅಶ್ವಿನ್ ಶೆಟ್ಟಿ ರನ್ನರ್ ಅಪ್, ಮಿಕ್ಸ್ ಡಬಲ್ ಪಂದ್ಯಾಟದಲ್ಲಿ ರಿತೇಶ್ ರೈ ಮತ್ತು ನಿರುಪುಣಿ ಶೆಟ್ಟಿ ವಿನ್ನರ್, ದೀರ್ ಮತ್ತು ಸೃಷ್ಟಿ ರನ್ನರ್ ಅಪ್, ಹದಿನೈದು ವರ್ಷದಿಂದ ಐವತ್ತು ವರ್ಷದ ಒಳಗಿನ ಜೋಡಿ ಪಂದ್ಯಾಟದಲ್ಲಿ ಅಂಜನ್ ರೈ ಮತ್ತು ಆಶ್ರೀತ ರೈ ವಿನ್ನರ್, ದಿನೇಶ್ ಶೆಟ್ಟಿ ಮತ್ತು ಅಕ್ಷತಾ ಶೆಟ್ಟಿ ರನ್ನರ್ ಅಪ್ ಪಡೆದರು. ವಾಲಿಬಾಲ್ ಪಂದ್ಯಾಟದಲ್ಲಿ ಟೀಮ್ ವಾಲ್ಟೆಕ್ ವಿನ್ನರ್, ಕಾರ್ಕಳ ಫ್ರೆಂಡ್ಸ್ ರನ್ನರ್ ಅಪ್ ಪಡೆದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಹಾಗೂ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಪದಾಧಿಕಾರಿಗಳಾದ ಪ್ರೇಮನಾಥ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ರವಿರಾಜ್ ಶೆಟ್ಟಿ, ವಾಸು ಶೆಟ್ಟಿ, ಗುಣಶೀಲ್ ಶೆಟ್ಟಿ, ವಿನೋದ್ ಶೆಟ್ಟಿ, ಕ್ರೀಡಾ ಕಾರ್ಯಕ್ರಮದ ಸಂಘಟಕರಾದ ಸುಪ್ರಜ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಕೆಲವು ವಾರಗಳ ಹಿಂದೆ ದುಡಿದ 2025 ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯರಾದ ದೀಪ್ತಿ ದಿನ್ ರಾಜ್ ಶೆಟ್ಟಿ, ಚೈತ್ರ ಅನುಪ್ ಶೆಟ್ಟಿ, ಪೃಥ್ವಿ ಸುಪ್ರಜ್ ಶೆಟ್ಟಿ, ವಸಂತ ಶೆಟ್ಟಿ, ರಜಿತಾ ವಸಂತ ಶೆಟ್ಟಿ, ಸೀತಾರಾಮ ಶೆಟ್ಟಿ, ಅಶ್ವಿನಿ ಸೀತಾರಾಮ ಶೆಟ್ಟಿ, ಗೋಕುಲದಾಸ್ ರೈ, ನಿಶ್ಮಿತಾ ಗೋಕುಲದಾಸ್ ರೈ, ಕೀರ್ತಿ ನಿತ್ಯ ಪ್ರಕಾಶ್ ಶೆಟ್ಟಿ, ಮೇಘ ಪ್ರಸನ್ನ ಶೆಟ್ಟಿ, ವಿದ್ಯಾಶ್ರಿ ಸತೀಶ್ ಹೆಗ್ಡೆ, ದೀಪಾ ಕಿರಣ್ ಶೆಟ್ಟಿ, ಲಾಸ್ಯ ಸಂಪತ್ ಶೆಟ್ಟಿ ಹಾಗೂ ಬಾಲಕೃಷ್ಣ ಶೆಟ್ಟಿ, ಸಂತೋಷ್ ಶೆಟ್ಟಿ ಪೊಳಲಿ ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ದನ್ಯವಾದ ತಿಳಿಸಿದರು. ಉದ್ಘಾಟನಾ ಸಮಾರಂಭವನ್ನು ವಿಘ್ನೇಶ್ ಕುಂದಾಪುರ ಹಾಗೂ ಸಮಾರೋಪ ಸಮಾರಂಭವನ್ನು ಸಂದೇಶ್ ಶೆಟ್ಟಿ ಅಚ್ಚುಕಟ್ಟಾಗಿ ನಿರೂಪಿಸಿದರು.
ಚಿತ್ರ, ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)