ಕಾಂತಾರ ಚಾಪ್ಟರ್ ೧ ರ ಟ್ರೈಲರ್ ಬಂದಿದೆ. ರಿಷಬ್ ಶೆಟ್ಟಿಯವರಿಂದ ದೈವಗಳ ನಂಬಿಕೆ ಹಾಳಾಯಿತು ಎಂದು ವಾದಿಸುವ ಒಂದು ವರ್ಗ ಈಗ ಮೆಲ್ಲ ಥಿಯೇಟರ್ ಕಡೆ ಸಾಗುವ ಪರಿಸ್ಥಿತಿ ಬರಬಹುದು. ಯಾಕೆಂದರೆ ಟ್ರೈಲರ್ ನಲ್ಲಿ ಬೆರ್ಮೆರೆ ಹಾಗೂ ಇತರ ದೇವರ ಕಥೆಯೂ ಉಲ್ಲೇಖ ಆಗಿದೆ. ದೈವಗಳ ವೇಷವನ್ನು ಹಿಂದೆ ಅಂದರೆ ನಮ್ಮ ಶಾಲಾ ದಿನಗಳಲ್ಲಿ ನಾಟಕದಲ್ಲಿ, ಆಟದಲ್ಲಿ ಹಾಕಿ ಕುಣಿದವರು ನಾವುಗಳು. ನಮಗ್ಯಾರಿಗೂ ಅದನ್ನು ಅಪಹಾಸ್ಯ ಮಾಡುವ ಉದ್ಧೇಶ ಇರಲಿಲ್ಲ. ಕಾಂತಾರ ಬರುವುದಕ್ಕೂ ಮೊದಲೇ ದೈವಗಳ ಬಗ್ಗೆ ವಿಶ್ವದ ಅನೇಕ ಭಾಗದ ಜನ ಅಧ್ಯಯನಕ್ಕೂ ಬಂದಿದ್ದರು. ಹಾಗಾಗಿ ರಿಷಬ್ ಶೆಟ್ಟಿಯವರಿಂದ ದೈವಗಳು ಜಗತ್ತಿನ ಜನಕ್ಕೆ ಗೊತ್ತಾದದ್ದಲ್ಲ. ಆದರೂ ಅವರನ್ನು ಟಾರ್ಗೆಟ್ ಮಾಡುವ ಉದ್ಧೇಶ ಸ್ಪಷ್ಟ.ಯಾರು ದೈವಗಳನ್ನ ಅಪಹಾಸ್ಯ ಮಾಡುತ್ತಾರೋ ಅವರ ನಿಂದನೆ ಸರಿ. ಅವರ ವಿರುದ್ಧ ಈ ಸಂಸ್ಕೃತಿ ರಕ್ಷಕರು ಅಂದುಕೊಂಡಿರುವವರು ಕೇಸು ಹಾಕಲಿ. ಹಾಗಂತಾ ತಾನು ಭಕ್ತಿಯಲ್ಲಿದ್ದು ಚಿತ್ರದ ಮೂಲಕ ತೋರಿಸಿದಕ್ಕೆ ಟೀಕಿಸುವುದು ಸರಿ ಅಲ್ಲ. ಒಟ್ಟಿನಲ್ಲಿ ಕಾಂತಾರ ಗೆಲ್ಲಲಿ. ಹಿಂದೂ ಸಂಸ್ಕೃತಿಯನ್ನು ಸದಾ ಅವಮಾನಿಸುವ ಬಾಲಿವುಡ್ ನವರು ಕಾಂತಾರದಂತಹ ಚಿತ್ರಗಳನ್ನ ನಿರ್ಮಿಸಲಿ. ಯಾಕೆಂದರೆ ಭಾರತದ ಪ್ರತೀ ಮೂಲೆಯಲ್ಲೂ ಇಂಥಹ ದೈವಿಕ ಶಕ್ತಿಗಳು ಅನೇಕ ಇರಬಹುದು ಅದರ ಮಾಹಿತಿ ನಮಗೂ ಸಿಗಲಿ.
