‘ಅಂಕಿತ್ ವಿಸ್ತಾ’ ಸುಮಾರು ಇಪ್ಪತ್ತು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಎದ್ದು ನಿಂತಿರುವ ರೆಸಾರ್ಟ್. ಬೆಂಗಳೂರಿನ ನೆಲಮಂಗಳದಲ್ಲಿ ಪ್ರವಾಸಿಗರ ಆಕರ್ಷಣೆ ಕೇಂದ್ರವೆಂದು ದೇಶಾದ್ಯಂತ ಹೆಸರು ಗಳಿಸಿದ ಈ ಸಂಕೀರ್ಣದಲ್ಲಿ ವಿವಾಹ ಸಮಾರಂಭ ಮೊದಲಾದ ಶುಭಕಾರ್ಯಗಳಿಗೆ ತೆರೆದುಕೊಂಡಿರುವ ಸುಸಜ್ಜಿತ ಸಭಾಗೃಹ ಜೊತೆಗೆ ದಣಿದ ಜೀವಗಳಿಗೆ ವಿಶ್ರಾಂತಿ ನೀಡುವ ಸಕಲ ಸೌಲಭ್ಯಗಳನ್ನು ಹೊಂದಿದ ವಸತಿ ಗೃಹ ಸಮುಚ್ಚಯ ಪ್ರವಾಸಿಗರನ್ನು ಈ ಕಡೆಗೆ ಕೈ ಬೀಸಿ ಕರೆಯುತ್ತಿದೆ. ಈಜು ಕೊಳ, ವಿಶಾಲ ಆಟದ ಮೈದಾನ, ದೇಹ ಮನಸ್ಸುಗಳಿಗೆ ಹಿತವಾದ ವ್ಯಾಯಾಮ ನೀಡಬಹುದಾದ ಪ್ರಶಸ್ತ ಸ್ಥಳ ಸಲಕರಣೆಗಳು, ಭೋಜನ ಶಾಲೆ, ಅತಿಥಿ ಸತ್ಕಾರ ವಿಭಾಗ ಎಲ್ಲವೂ ಇಲ್ಲಿವೆ. ಸಮಾಲೋಚನಾ ಕೊಠಡಿಗಳು, ಹಸಿರು ತಂಪು ವಾತಾವರಣ, ಬಗೆ ಬಗೆಯ ವೃಕ್ಷ ಜಾತಿಗಳು ಗಿಡ ಬಳ್ಳಿಗಳು ಎಲ್ಲವೂ ಸುಂದರ ಹೃದ್ಯ ಮನೋಹರ. ಕರಾವಳಿ ಕರ್ನಾಟಕದ ಪರಿಸರದೊಂದಿಗೆ ನಮ್ಮನ್ನು ಜೋಡಿಸಿ ತಾದಾತ್ಮ್ಯತೆಗೊಳಿಸುವ ನಿಸರ್ಗ ಸೌಂದರ್ಯ ಇದೆ.ತುಳುನಾಡಿನ ಹೆಮ್ಮೆಯ ಉದ್ಯಮಿ ವಸಂತ ಕುಮಾರ್ ಶೆಟ್ಟಿ ಅವರ ಕನಸಿನ ಕೂಸು ಇಲ್ಲಿ ಅದ್ಭುತ ರೀತಿಯಲ್ಲಿ ಸಾಕಾರಗೊಂಡಿದೆ. ಇಲ್ಲಿ ವಾರಾಂತ್ಯದ ಮೋಜು, ಸ್ನೇಹ ಸಮ್ಮಿಲನ ಸ್ಥಳಾವಕಾಶ, ಚಲನಚಿತ್ರ ಚಿತ್ರೀಕರಣಗಳಿಗೆ ಯೋಗ್ಯವಾದ ವಿಶಾಲ ಪ್ರದೇಶದಲ್ಲಿ ಸ್ಟುಡಿಯೋ ಹಾಗೂ ಪ್ರಶಸ್ತ ನಿಸರ್ಗ ಆಕರ್ಷಣೆಗಳಿವೆ. ಇಲ್ಲಿನ ಸರ್ವ ಸಿಬ್ಬಂದಿಗಳು ಒಂದು ಕೂಡು ಕುಟುಂಬದ ರೀತಿಯಲ್ಲಿ ಆತ್ಮ ಸಂತೋಷ ಪಡುತ್ತಾರೆ. ಬೆಂಗಳೂರಿಗೆ ತೀರಾ ಹತ್ತಿರ ಇರುವ ಈ ಹೊರಾಂಗಣ ವಿಶಾಲ ಅಂಕಿತ್ ವಿಸ್ತಾ ಇಂದು ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿದೆ. ಜೊತೆಗೆ ಅನೇಕ ಬ್ಯಾಂಕ್ ಗಳ ಬ್ರಾಂಚ್ ಗಳು ಇವೆ. ನಗರ ಸೌಲಭ್ಯಗಳ ಜೊತೆಗೆ ಕಾಶ್ಮೀರವನ್ನು ಹೋಲುವ ನಿಸರ್ಗ ಸೌಂದರ್ಯ ಇದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಮಾಜದ ಗಣ್ಯರಿಗೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳಿಗೆ ಸಂಪೂರ್ಣ ಸಮಾಧಾನ ನೀಡುವ ಸೇವೆಯನ್ನು ಒದಗಿಸಬಹುದಾದ ಉನ್ನತ ಶಿಕ್ಷಣ ಪಡೆದ ಸಿಬ್ಬಂದಿಗಳು ಇದ್ದಾರೆ.
ಜೀವನದ ಆನಂದದ ಅನುಭವ ಹೊಂದುವ ಇಚ್ಛೆಯ ನಾಗರೀಕರು ಒಮ್ಮೆ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣವೂ ಇದಾಗಿದೆ. ಬಗೆ ಬಗೆಯ ಖಾದ್ಯಗಳು, ಪೇಯಗಳು, ದೇಶಿ ಅಂತರ್ದೇಶಿ ಆಹಾರ ಪದ್ಧತಿ, ಕ್ಯಾಟರಿಂಗ್, ಯೋಗ ತರಬೇತಿ ಕೇಂದ್ರ, ಔಷದೋಪಚಾರ ಕೇಂದ್ರ, ಕ್ರಿಕೆಟ್ ಆಟದ ಮೈದಾನ ಎಲ್ಲವೂ ಇಲ್ಲಿವೆ. ನಮ್ಮ ತುಳುನಾಡಿನ ಪರಂಪರೆಯ ಗುತ್ತು ಮನೆಗಳು, ಮಧ್ಯಮ ಬಡವರ ಮನೆಗಳ ನೈಜ ಚಿತ್ರಣ, ತುಳುನಾಡ ಕರಾವಳಿ ಪ್ರದೇಶದಲ್ಲಿ ಪ್ರಚಲಿತದ ಶಿಲ್ಪ ಕಲೆ ಇಲ್ಲಿ ಕಾಣ ಸಿಗುತ್ತದೆ. ಪಾರ್ಟಿ ಹಾಲ್ ಗಳು, ಸಭೆ ಸಮಾರಂಭಗಳಿಗೆ ಪ್ರಶಸ್ತ ಎಣಿಸುವ ಸಭಾಗೃಹಗಳು, ಕನಿಷ್ಠ ಸಂಖ್ಯೆಯ ಮಿತ್ರರ ಮೀಟಿಂಗ್ ರೂಮುಗಳು, ಸ್ನಾನ ಗೃಹ ಶೌಚಾಲಯಗಳು, ಸಿನೇಮಾ ಸ್ಕ್ರೀನ್ ಗಳು ಹೀಗೆ ಸ್ವರ್ಗದ ವೈಭವ ಕಣ್ಣಿಗೆ ಕಟ್ಟುವಂತೆ ಕಾಣುವ ಈ ತಾಣವನ್ನು ಒಮ್ಮೆಯಾದರೂ ಭೇಟಿ ಮಾಡಿ ಇಲ್ಲಿಯ ಆನಂದವನ್ನು ಅನುಭವಿಸುವ ಆಸೆ ಹೊಂದಿದರೆ ಅಚ್ಚರಿ ಪಡಬೇಕಾಗಿಲ್ಲ. ನಮ್ಮ ತುಳುನಾಡ ಕರಾವಳಿ ಕುಟುಂಬದ ಸಾಧನೆ ನಮಗೆಲ್ಲಾ ಅತೀವ ಹೆಮ್ಮೆ ತರುವ ವಿಷಯ.
