ಬೈಲೂರು:- 2024-25ನೆಯ ಶೈಕ್ಷಣಿಕ ಸಾಲಿನ ಹತ್ತನೆಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಕಾರ್ಕಳ ತಾಲೂಕಿನ ಗಣಿತ ನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಹೈಸ್ಕೂಲು ಇಲ್ಲಿನ ವಿದ್ಯಾರ್ಥಿನಿ ಸ್ವಸ್ತಿ.ಎಸ್ ಶೆಟ್ಟಿ ಶೇಕಡಾ 97.44 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೈಲೂರು ಪೆಲತ್ತೂರು ಕುಂಬರ್ಜಡ್ಡು ಪ್ರೀತಿಕಾ ನಿಲಯ ಸುರೇಶ. ಎನ್. ಶೆಟ್ಟಿ ಹಾಗೂ ಉಡುಪಿ ಅಂಬಲಪಾಡಿ ಕಪ್ಪೆಟ್ಟು ಶ್ರೀ ರತ್ನಾ ನಿವಾಸದ ಸೌಮ್ಯ.ಎಸ್.ಶೆಟ್ಟಿ ಇವರ ಸುಪುತ್ರಿಯಾಗಿದ್ದಾರೆ.
