ಬೆಂಗಳೂರಿನ ಪ್ರಖ್ಯಾತ ಉದ್ಯಮಿ, ಸ್ಮಾರ್ಟ್ ಲೈನರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ, ಬೆಂಗಳೂರು ಬಂಟರ ಸಂಘದ ಮಾಜಿ ಖಜಾಂಚಿ ಅಮರನಾಥ್ ಶೆಟ್ಟಿ ಹೆಗ್ಗುಂಜೆ ಅವರು ಸಾಗರ ಬಂಟರ ಭವನ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ವೈಯಕ್ತಿಕ ಕಾರ್ಯಕ್ರಮ ನಿಮಿತ್ತ ಸಾಗರಕ್ಕೆ ಭೇಟಿ ನೀಡಿದ್ದ ಅಮರನಾಥ್ ಶೆಟ್ಟಿ ಅವರನ್ನು ಸಾಗರ ಬಂಟರ ಸಂಘದ ಮುಖಂಡರು ಸಾಗರ ಬಂಟರ ಸಂಘದ ಕಟ್ಟಡಕ್ಕೆ ಭೇಟಿ ನೀಡಲು ಆಹ್ವಾನ ನೀಡಿದ ಸಂದರ್ಭದಲ್ಲಿ ಕಟ್ಟಡದ ಪ್ರಗತಿಯನ್ನು ಕಂಡು ನಾನು ನಿಮ್ಮ ಕಷ್ಟಗಳಿಗೆ ಜೊತೆಯಾಗುತ್ತೇನೆ ಎಂದರು. ಆ ಕೂಡಲೇ ರೂ 5 ಲಕ್ಷ ದೇಣಿಗೆಯನ್ನು ನೀಡಿ ಮಾತನಾಡಿ, ನಾನು ಸತತವಾಗಿ 15 ವರ್ಷಗಳಿಂದ ಬೆಂಗಳೂರು ಬಂಟರ ಸಂಘ ಹಾಗೂ ಹಲವಾರು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮುದಾಯದ ಕೆಲಸ ದೇವರ ಕೆಲಸ ಎಂದು ಪರಿಗಣಿಸಿದ್ದೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ಹಕ್ಲಾಡಿ ಅವರು ಅಮರನಾಥ್ ಶೆಟ್ಟಿ ಅವರ ಹಲವಾರು ಸಾಮಾಜಿಕ ಕಾರ್ಯಗಳನ್ನು ನೆನಪು ಮಾಡಿಕೊಂಡರು. ಸಾಗರ ಬಂಟರ ಸಂಘದ ಕಟ್ಟಡಕ್ಕೆ 5 ಲಕ್ಷಗಳ ನೆರವನ್ನು ನೀಡಿದ ಅಮರನಾಥ್ ಶೆಟ್ಟಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಸಾಗರ ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಗೌರವಾಧ್ಯಕ್ಷರಾದ ಜಯಶೀಲ ಶೆಟ್ಟಿ, ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ನಿರ್ದೇಶಕರುಗಳಾದ ಸದಾನಂದ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಶ್ರೀಧರ ಶೆಟ್ಟಿ, ರವಿ ಶೆಟ್ಟಿ ಟೈಲರ್, ಪ್ರಕಾಶ್ ಶೆಟ್ಟಿ ಆನಗಳ್ಳಿ, ಉಮೇಶ್ ಶೆಟ್ಟಿ ಹೊಸನಗರ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
