ಖೇಲೋ ಇಂಡಿಯಾ 2025 ರಲ್ಲಿ ಭಾಗವಹಿಸಿದ ಮಂಗಳೂರು ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಚಿಂತನ್ ಎಸ್. ಶೆಟ್ಟಿ ಈಜು ಚಾಂಪಿಯನ್ಶಿಪ್ನಲ್ಲಿ 2 ಚಿನ್ನ ಮತ್ತು 4 ಬೆಳ್ಳಿ ಪದಕಗಳನ್ನು ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.ಮೇ 5 ರಿಂದ ಮೇ 9 ರವರೆಗೆ ಬಿಹಾರದ ಗಯಾದಲ್ಲಿ ಖೇಲೋ ಇಂಡಿಯಾ 2025 ನಡೆದಿದ್ದು, ಅದರಲ್ಲಿನ ಈಜು ಚಾಂಪಿಯನ್ಶಿಪ್ನಲ್ಲಿ ಚಿಂತನ್ ಎಸ್. ಶೆಟ್ಟಿ ಸ್ಪರ್ಧಿಸಿ 2 ಚಿನ್ನ ಮತ್ತು 4 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಬೆಂಗಳೂರಿನ ಸರ್ಜಾಪುರದ ಲಕ್ಷ್ಯನ್ ಅಕಾಡೆಮಿ ಆಫ್ ಸ್ಪೋರ್ಟ್ಸ್ ನ ಕೋಚ್, ನಿರೂಪ್ ಮತ್ತು ರೋಹಿತ್ ಅವರಿಂದ ತರಬೇತಿ ಪಡೆಯುತ್ತಿರುವ ಚಿಂತನ್ ಶೆಟ್ಟಿ ಶಶಿಧರ್ ಶೆಟ್ಟಿ ಮತ್ತು ಹರಿಣಾಕ್ಷಿ ಶೆಟ್ಟಿ ಅವರ ಪುತ್ರ.
