ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ನೂತನ ಕಿನ್ನಿಗೋಳಿ ಘಟಕದ ಉದ್ಘಾಟನೆಯು ಕಿನ್ನಿಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಟಪದ ಬಳಿ ನಡೆಯಿತು. ಕಟೀಲು ಕ್ಷೇತ್ರದ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣರವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ನೂತನ ಕಿನ್ನಿಗೋಳಿ ಘಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಂಡ್ಕೂರು ಕ್ಷೇತ್ರದ ಅರ್ಚಕ ರಾಮದಾಸ ಆಚಾರ್ಯ, ಸುರಗಿರಿ ಕ್ಷೇತ್ರದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನೀರೆ ವಿಶ್ವನಾಥ ಶೆಟ್ಟಿ, ಮಲ್ಲಿಕಾ ಯಶವಂತ ಶೆಟ್ಟಿ ಬಳಕುಂಜಗುತ್ತು, ಧನಂಜಯ ಶೆಟ್ಟಿಗಾರ ದುಬೈ, ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಯಾದವ ದೇವಾಡಿಗ, ಧನಪಾಲ ಶೆಟ್ಟಿ ತಾಳಿಪಾಡಿ ಗುತ್ತು, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಸುಧಾಕರ ಶೆಟ್ಟಿ ಮುಲ್ಲಡ್ಕ ಮುಂಡ್ಕೂರು, ಮಾಧವ ಶೆಟ್ಟಿಗಾರ್ ಕೆರೆಕಾಡು, ಬಬಿತಾ ಉಮೇಶ್ ಶೆಟ್ಟಿ, ರವೀಂದ್ರ ಶೆಟ್ಟಿ ಮುಲ್ಲಡ್ಕ ಪರಾರಿ, ದೀಪಕ್ ರೊಡ್ರಿಗಸ್ ಕಿನ್ನಿಗೋಳಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಿತಿನ್ ಶೆಟ್ಟಿ ಗುತ್ತಿನಾರ್ ಕೊಡೆತ್ತೂರುಗುತ್ತು, ಅಶೋಕ್ ಶೆಟ್ಟಿ ಪೆರ್ಮುದೆ, ಕುಶಾಲ ಪೂಜಾರಿ ತಾಳಿಪಾಡಿ, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಪಕ್ಷಿಕೆರೆ, ಪೃಥ್ವಿರಾಜ ಆಚಾರ್ಯ, ದಿವಾಕರ ಕರ್ಕೇರಾ, ಸ್ವರಾಜ್ ಶೆಟ್ಟಿ ಮುಂಡ್ಕೂರು, ಶಮೀನಾ ಆಳ್ವ ಕೆಂಚನಕೆರೆ, ಅಭಿಲಾಷ್ ಶೆಟ್ಟಿ ಕಟೀಲು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಶಕ್ತ ಕುಟುಂಬಕ್ಕೆ ವೈದ್ಯಕೀಯ ನೆರವು, ಸಾಧಕರ ನೆಲೆಯಲ್ಲಿ ಹವ್ಯಾಸ ಭಾಗವತ ಜಗನ್ನಾಥ ಶೆಟ್ಟಿ ಮಮ್ಮೆಟ್ಟು, ರಂಗ ಕಲಾವಿದ ಸಾಮಾಜಿಕ ಕಾರ್ಯಕರ್ತ ಕೃಷಿಕ ಸುಧಾಕರ ಸಾಲ್ಯಾನ್ ಸಂಕಲ ಕರಿಯ, ಪಾವಂಜೆ ಮೇಳದ ಹಿಮ್ಮೇಳ ಕಲಾವಿದ ಗುರುಪ್ರಸಾದ್ ಬೊಳಿಂಜರವರನ್ನು ಸಾಧಕರ ನೆಲೆಯಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಗೌರವಿಸಿದರು. ಸಭಾ ಕಾರ್ಯಕ್ರಮದ ಮೊದಲು ಕಿನ್ನಿಗೋಳಿ ಯುಗಪುರುಷ ಸಭಾಭವನದಿಂದ ವಿವಿಧ ಕುಣಿತ ಭಜನಾ ತಂಡಗಳ ಜೊತೆ ಪಾವಂಜೆ ಮೇಳದ ದೇವರನ್ನು ರಂಗಸ್ಥಳದ ಚೌಕಿಯವರೆಗೆ ಅದ್ದೂರಿಯ ಮೆರವಣಿಗೆ ನಡೆಯಿತು. ಬಳಿಕ ಯಕ್ಷಗಾನ ಗಾನ ವೈಭವದ ಅಂಗವಾಗಿ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಅನ್ನಸಂತರ್ಪಣೆ ನಡೆಯಿತು.
ನೂತನ ಕಿನ್ನಿಗೋಳಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ನೂತನ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಪ್ರಕಾಶ್ ಕಿನ್ನಿಗೋಳಿ ಪ್ರಾರ್ಥಿಸಿದರು. ಗೌರವಾಧ್ಯಕ್ಷ ಸಾಯಿನಾಥ್ ಶೆಟ್ಟಿ ಮುಂಡ್ಕೂರು ಪ್ರಸ್ತಾವನೆಗೈದರು. ಶರತ್ ಶೆಟ್ಟಿ ನಿರೂಪಿಸಿದರು. ದಿವಾಕರ ಕರ್ಕೇರಾ ಧನ್ಯವಾದ ಅರ್ಪಿಸಿದರು.