ಮೂಡುಬಿದಿರೆ: 2024-25ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ರ್ಯಾಂಕ್ ಪಟ್ಟಿ ಬಿಡುಗಡೆಗೊಂಡಿದ್ದು, ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಡಾ. ಜ್ಯೋತಿ ಕೆ. ವಿ. ಕ್ಲಿನಿಕಲ್ ನಾಚುರೋಪತಿ ವಿಭಾಗದಲ್ಲಿ ದ್ವಿತೀಯ ರ್ಯಾಂಕ್, ಡಾ. ಅನಘಶ್ರೀ ಎಸ್ ಕ್ಲಿನಿಕಲ್ ಯೋಗ ವಿಭಾಗದಲ್ಲಿ ತೃತೀಯ ರ್ಯಾಂಕ್, ಡಾ. ಲೆಂಜಿಕ್ಲೂ ಗಾನ್ಮೈ ಕ್ಲಿನಿಕಲ್ ಯೋಗ ವಿಭಾಗದಲ್ಲಿ ಆರನೆಯ ರ್ಯಾಂಕ್, ಡಾ. ಮೇಘನಾ ಎಂ. ಕ್ಲಿನಿಕಲ್ ನ್ಯಾಚುರೋಪತಿ ವಿಭಾಗದಲ್ಲಿ ಒಂಬತ್ತನೆಯ ರ್ಯಾಂಕ್ ಗಳಿಸಿದ್ದಾರೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯರು ಅಭಿನಂದಿಸಿದ್ದಾರೆ.
