ಬಪ್ಪನಾಡು ಕ್ಷೇತ್ರದ ಅನನ್ಯ ಭಕ್ತರು ಹಾಗೂ ಕಲೋಪಾಸಕರು ಆಗಿ ನಾಡಿನಾದ್ಯಂತ ಭಕ್ತ ಬಂಧುಗಳ ಪ್ರೀತಿಗೆ ಪಾತ್ರರಾದ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕಕ್ವಗುತ್ತು ಮನೋಹರ ಶೆಟ್ಟಿಯವರು ನಿಧನರಾಗಿದ್ದಾರೆ. ಬಂಟ ಸಮಾಜದ ಸರ್ವಶ್ರೇಷ್ಠ ವ್ಯಕ್ತಿಯಾಗಿ ಮಕ್ಕಳಿಂದ ಮುದುಕನವರೆಗೆ ಇವರು ತೋರಿದ ಸಮಾನಾಧಾರ ಭಾವ, ಹೃದಯದ ಮಾತುಗಳು ಪ್ರತಿಯೊಬ್ಬರಿಗೂ ಆದರ್ಶದಾಯಕ.

ಅನುಭವವೇ ದೇವರು ಎನ್ನುವ ಮಾತಿಗೆ ಅನುಸಾರವಾಗಿ ಜೀವನದಲ್ಲಿ ಸಾರ್ಥಕ್ಯವನ್ನು ಕಂಡು ಶ್ರೀ ಕ್ಷೇತ್ರ ಬಪ್ಪನಾಡಿನ ಮಹಾಮಾತೆಯ ಶ್ರೀರಕ್ಷೆಗೆ ಒಳಗಾಗಿ ಪ್ರತಿಯೊಬ್ಬರ ಹೃದಯದಲ್ಲಿ ಮನೆಮಾತಾದ ಇವರ ಆತ್ಮವು ಪರಮಾತ್ಮನಲ್ಲಿ ಲೀನವಾಗಿ ಆತ್ಮಕ್ಕೆ ಸದಾ ಚಿರಶಾಂತಿ ಸಿಗಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಪ್ರಾರ್ಥಿಸಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.