ಮೂಡುಬಿದಿರೆ: ಅನಿವರ್ಯ ವೆಚ್ಚಗಳಿಗೆ ಹಣ ವ್ಯಹಿಸಿ ಹಾಗೂ ಐಷರಾಮಿ ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನೆಮ್ಮದಿಯ ಜೀವನ ಸಾಧ್ಯ. ಹಣವನ್ನು ಸಂಪಾದಿಸುವುದು ಕಲೆ, ಆದರೆ ಅದನ್ನು ಸಮರ್ಪಕವಾಗಿ ಬಳಸುವುದು ಮಹಾನ್ ಕಲೆ” ಎಂದು ಆರ್ಥಿಕ ಸಾಕ್ಷರತಾ ತಜ್ಞೆ ಸಪ್ನಾ ಶೆಣೈ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ -ಸಕ್ಷಮ ವೇದಿಕೆಯ ಅಡಿಯಲ್ಲಿ ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಮೂಡುಬಿದಿರೆ ಬಂಟ್ಸ್ ಮಹಿಳಾ ಸಂಘದ ಸಹಯೋಗದಲ್ಲಿ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಬುಧವಾರ ‘ಆರ್ಥಿಕ ಅರಿವಿನ ಮೂಲಕ ಮಹಿಳೆಯರ ಬಲಪಡಿಸುವಿಕೆ” ವಿಶೇಷ ಉಪನ್ಯಾಸ ಕರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ಹೆಚ್ಚಿನ ಸಮಯ ಹಣವನ್ನು ಸಂಪಾದಿಸಲು ಮತ್ತು ಖರ್ಚು ಮಾಡಲು ಕಳೆಯುತ್ತೇವೆ. ಬಹುತೇಕ ಜನರು “ಆದಾಯ – ಖರ್ಚು – ಉಳಿವು” ಎಂಬ ನೀತಿಯಂತೆ ಜೀವನ ಸಾಗಿಸುತ್ತಾರೆ. ಆದರೆ, ಇದು ಹೆಚ್ಚು ಆರ್ಥಿಕ ಒತ್ತಡವನ್ನು ತರಬಲ್ಲದು. ಬದಲಾಗಿ, “ಆದಾಯ – ಉಳಿವು – ಖರ್ಚು” ಎಂಬ ತತ್ವವನ್ನು ಅನುಸರಿಸಿದರೆ ಸುಖ ಮತ್ತು ಯಶಸ್ಸಿನ ದಾರಿ ನಮ್ಮದಾಗತ್ತದೆ ಎಂದರು. ಉತ್ಪಾದಕ ಸಾಲಗಳು ಮತ್ತು ನಿರರ್ಥಕ ಸಾಲಗಳು – ಆರ್ಥಿಕ ಸುಧಾರಣೆ ಅಥವಾ ಸಂಕಷ್ಟ? ಬಹುತೇಕ ಜನರು ತಮ್ಮ ಬಂಡವಾಳದ ಕೊರತೆಯನ್ನು ಪೂರೈಸಲು ಸಾಲವನ್ನು ತೆಗೆದುಕೊಳ್ಳುತ್ತಾರೆ. ಆದರೆ, ಸಾಲವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಅದು ಜೀವನವನ್ನು ಸುಗಮಗೊಳಿಸುತ್ತದೆ, ಇಲ್ಲದಿದ್ದರೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಈ ಸಾಲಗಳ ಪೈಕಿ “ಉತ್ಪಾದಕ ಸಾಲಗಳಾದ- ವಸತಿ, ಶಿಕ್ಷಣ, ವ್ಯಾಪಾರ ಸಾಲಗಳು ನಮ್ಮ ಭವಿಷ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ.
ಆದರೆ ನಿರರ್ಥಕ ಸಾಲಗಳಾದ ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ, ಚಿಟ್ ಫಂಡ್ ಇವು ಆರ್ಥಿಕ ಭದ್ರತೆಯನ್ನು ಹಾಳುಮಾಡಬಹುದು. ಆದುದರಿಂದ ಹಣದ ನಿರ್ವಹಣೆಯಲ್ಲಿ ಜಾಣ್ಮೆ ತೋರಿ ಎಂದರು. ಕರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಹಣ ನಿರ್ವಹಣೆಯೆ ಜೀವನ ನಿರ್ವಹಣೆ. ಹಣದ ಸಮರ್ಪಕ ನಿರ್ವಹಣೆ ಬದುಕಿಗೆ ಭದ್ರತೆಯನ್ನು ನೀಡಬಲ್ಲದು. ಹಣಕಾಸಿನ ಸಾಕ್ಷರತೆ ಕೇವಲ ಹಣ ಸಂಪಾದಿಸುವುದನ್ನು ತಿಳಿಸುವುದು ಮಾತ್ರವಲ್ಲ, ಹಣದ ನಿರ್ವಹಣೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದಾಗಿದೆ ಎಂದರು. ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿಯಂದಿರು ಹಣವನ್ನು ಸಂಗ್ರಹಿಸಿ ಕೂಡಿಡುವ ಕೆಲಸವನ್ನು ಮಾಡುತ್ತಿದ್ದರು. ಈಗ ಬ್ಯಾಂಕ್ಗಳು ಈ ಕೆಲಸವನ್ನು ನಿರ್ವಹಿಸುತ್ತಿವೆ. ಪ್ರತಿಷ್ಠಾನದ ಮಹಿಳಾ ವೇದಿಕೆ- ಸಕ್ಷಮವು ಕಳೆದ ವರ್ಷ ಮಾನಸಿಕ ಆರೋಗ್ಯದ ಕುರಿತು ಕರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಿತ್ತು, ಈ ಭಾರಿ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆಯ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಸಂಘಟನೆಯು ಸಮಾಜದ ವಿವಿಧ ಮಹಿಳಾ ಸಂಘಟನೆಯ ಜೊತೆಗೂಡಿ ಇನ್ನೂ ಹೆಚ್ಚಿನ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗುವಂತಾಗಲಿ ಎಂದರು.
ಈ ವೇದಿಕೆ ಪರಸ್ಪರ ಸಂತೋಷಕ್ಕೆ ಮಾತ್ರ ಸ್ಪಂದಿಸದೆ, ಕಷ್ಟಗಳಿಗೂ ಮಿಡಿಯುವ ಕೆಲಸ ಮಾಡಬೇಕಿದೆ. ನಮ್ಮಲ್ಲಿ ಕೆಲಸ ನಿರ್ವಹಿಸುವರಲ್ಲಿ ೬೦% ಮಹಿಳೆಯರಿದ್ದು, ನಮ್ಮ ಶಿಕ್ಷಣ ಪ್ರತಿಷ್ಠಾನದ ಉನ್ನತಿಗೆ ಅವರ ಕೊಡುಗೆ ಅಪಾರ. ಕರ್ಯಕ್ರಮದಲ್ಲಿ ಮೂಡುಬಿದಿರೆ ಬಂಟ್ಸ್ ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ಎಸ್ ಹೆಗ್ಡೆ, ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂಧ್ಯಾ ಶರತ್ ಶೆಟ್ಟಿ, ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ ಗ್ರೀಷ್ಮಾ ಆಳ್ವ, ಸಕ್ಷಮ ವೇದಿಕೆಯ ಅಧ್ಯಕ್ಷೆ ಡಾ ಮೂಕಾಂಬಿಕಾ ಜಿ.ಎಸ್, ಆಳ್ವಾಸ್ ಕಾಲೇಜಿನ ಪ್ರಾಚರ್ಯ ಡಾ ಕುರಿಯನ್ ಇದ್ದರು. ಆಳ್ವಾಸ್ ಸ್ನಾತಕೋತ್ತರ ಆಹಾರ ವಿಜ್ಞಾನ ಹಾಗೂ ಪೋಷಣೆ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಪ್ರಭಾತ್ ನಿರೂಪಿಸಿ, ಆಳ್ವಾಸ್ ವೆಲ್ನೆಸ್ ಟ್ರೈನಿಂಗ್ ಸೆಂಟರ್ನ ನಿರ್ದೇಶಕಿ ಡಾ ದೀಪಾ ಕೊಠಾರಿ ಅತಿಥಿಯನ್ನು ಪರಿಚಯಿಸಿದರು. ಎರಡು ಅಧಿವೇಶನಗಳಲ್ಲಿ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಕರ್ಯಕ್ರಮ ನಡೆಯಿತು.
Previous Articleಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಆಡಳಿತ ಮಂಡಳಿ ಚುನಾವಣೆ : ಹಾಲಿ ಅಧ್ಯಕ್ಷ ಶ್ರೀ ಕೆ. ಜೈರಾಜ್ ಬಿ. ರೈ ನೇತೃತ್ವದ ತಂಡಕ್ಕೆ ಬಹುಮತದ ಗೆಲುವು
Next Article ಹೆಬ್ರಿ ಬಂಟರ ಸಂಘ : 40 ರ ಸಂಭ್ರಮ, ವಿದ್ಯಾರ್ಥಿವೇತನ ವಿತರಣೆ