ಜನವರಿ 03, 2025 ರಂದು ಕಾರ್ಕಳದ ಜೋಡುರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕಮನೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಎರಡು ಪ್ರಮುಖ ದಿಗ್ಗಜರು ಆಗಮಿಸುತ್ತಿದ್ದಾರೆ. ಚಂದನವಾಹಿನಿಯಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರಾಗಿರುವ, ನಡೆದಾಡುವ ಗ್ರಂಥಾಲಯ ಎಂಬ ಖ್ಯಾತಿಯನ್ನು ಪಡೆದ ಡಾ. ನಾ ಸೋಮೇಶ್ವರ ಅವರು ಸಂಜೆ 4.00 ಗಂಟೆಗೆ ಮೂಡುಬಿದಿರೆ ಕ್ರಿಯೇಟಿವ್ ಪುಸ್ತಕಮನೆಗೆ ಹಾಗೂ ಸಂಜೆ 5.00 ಗಂಟೆಗೆ ಕಾರ್ಕಳದ ಜೋಡುರಸ್ತೆಯ ಕ್ರಿಯೇಟಿವ್ ಪುಸ್ತಕಮನೆಗೆ ಮತ್ತು ಕನ್ನಡದ ಪ್ರೇಮಕವಿ ಹಾಗು ತುಂಟಕವಿ ಎಂದೇ ಚಿರಪರಿಚಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಂಜೆ 5.30ಕ್ಕೆ ಕಾರ್ಕಳದ ಜೋಡುರಸ್ತೆಯ ಪುಸ್ತಕಮನೆಗೆ ಆಗಮಿಸುತ್ತಿದ್ದಾರೆ.
ಈ ಇಬ್ಬರು ಖ್ಯಾತ ಲೇಖಕರ ಭೇಟಿ ಸಾಹಿತ್ಯಾಸಕ್ತರಿಗೆ ಒಂದು ಸುವರ್ಣಾವಕಾಶ. ಸಾಹಿತ್ಯಾಸಕ್ತರು ಈ ಅಪರೂಪದ ಸಂದರ್ಭದಲ್ಲಿ ಪಾಲ್ಗೊಂಡು, ಈ ಸಾಹಿತ್ಯ ದಿಗ್ಗಜರ ಭೇಟಿಯಿಂದ ಪ್ರೇರಣೆಯನ್ನು ಪಡೆಯುವಂತೆ ಆಹ್ವಾನಿಸಲಾಗಿದೆ.
ಸ್ಥಳ:
ಕ್ರಿಯೇಟಿವ್ ಪುಸ್ತಕಮನೆ,
ಜೋಡುರಸ್ತೆ, ಕಾರ್ಕಳ