ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಉಡುಪಿ ತಾಲೂಕು ಸಮಿತಿ ಹಾಗೂ ಉಡುಪಿ ತಾಲೂಕು ಸಮಿತಿ ವ್ಯಾಪ್ತಿಯ ಬಂಟರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ನಡೆದ ದಿವಂಗತ ಕೆ ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಬಂಟ ಸಮ್ಮಿಲನ ಕಾರ್ಯಕ್ರಮದಲ್ಲಿ ಬಂಟ ಸಮುದಾಯದ ಐವರು ಸಾಧಕರನ್ನು ಸನ್ಮಾನಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬ್ರಿಗೇಡಿಯರ್ ರಂಜಿತ್ ಆಳ್ವ (ಸೇವಾ ಮೆಡಲ್) ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿವೇತನಕ್ಕೆ ಚಾಲನೆ ನೀಡಿದರು. ಬ್ರಿಗೇಡಿಯರ್ ರಂಜಿತ್ ಆಳ್ವ ಅವರನ್ನು ಗೌರವಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಂದಿಕೂರು ಅಸ್ಪೆನ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ನ ಜಿಎಂ ಅಶೋಕ್ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಭುವನಪ್ರಸಾದ್ ಹೆಗ್ಡೆ, ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಕ್ರೀಡಾಪಟು ಅವಿನಾಶ್ ಕುಮಾರ್ ವಿ ಶೆಟ್ಟಿ ಕಟಪಾಡಿ, ಪ್ರಗತಿಪರ ಕೃಷಿಕರಾದ ಮಲ್ಲಿಕಾ ಶಿವರಾಂ ಶೆಟ್ಟಿ ಗಿಳಿಯಾರು, ಕರ್ನಾಟಕ ರಣಜಿ ಕ್ರಿಕೆಟ್ ಆಟಗಾರ ಅಭಿಲಾಶ್ ಶೆಟ್ಟಿ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಆರ್.ಜಿ ಗ್ರೂಪ್ ಛೇರ್ಮನ್ ಡಾ| ಕೆ ಪ್ರಕಾಶ್ ಶೆಟ್ಟಿ, ಬಿ ಜಯರಾಜ್ ಹೆಗ್ಡೆ, ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ, ಸಂಚಾಲಕ ಎಚ್ ಶಿವಪ್ರಸಾದ್ ಹೆಗ್ಡೆ, ಸಹ ಸಂಚಾಲಕ ದಿನೇಶ್ ಹೆಗ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಭುಜಂಗ ಶೆಟ್ಟಿ, ನಿತೀಶ್ ಕುಮಾರ್ ಶೆಟ್ಟಿ, ಸುಭಾಶ್ ಬಳ್ಳಾಲ್, ಇಂದಿರಾ ಸುಬ್ಬಯ್ಯ ಹೆಗ್ಡೆ, ಹರೀಶ್ ಶೆಟ್ಟಿ ಚೇರ್ಕಾಡಿ, ಮಿಥುನ್ ಆರ್ ಹೆಗ್ಡೆ, ಶ್ರೀಧರ್ ಶೆಟ್ಟಿ ಕುತ್ಯಾರು ಬೀಡು, ನಾಮ ನಿರ್ದೇಶನ ಸದಸ್ಯರಾದ ಕಿಶೋರ್ ಶೆಟ್ಟಿ ಎರ್ಮಾಲ್, ನಿರುಪಮಾ ಪ್ರಸಾದ್ ಶೆಟ್ಟಿ ಉಡುಪಿ, ಪ್ರಸಾದ್ ಹೆಗ್ಡೆ ಮಾರಾಳಿ ಉಪಸ್ಥಿತರಿದ್ದರು.