ವಿದ್ಯಾಗಿರಿ: ಆಳ್ವಾಸ್ ವಿರಾಸತ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನದ ಬಳಿಕ ಸುಧೆಯಾಗಿ ಹರಿದದ್ದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರ ಸ್ವರ ಮಾಧರ್ಯ. ಶ್ರೀ ರಾಗದ ಮೂಲಕ ಕಛೇರಿ ಆರಂಭಿಸಿದ ಅವರು ಮುರಲೀ ಸ್ತುತಿಸುತ್ತಾ ‘ಆನಂದ ದೇ ಮುಖ ಚಂದ್ರ ಐ ಸೇ ಚಾಂದನಿ ಸಾಂದ್ರ…’ಬಾದಲ್ ಆಯೇ ನಭಾ ಮೇ…ಯಾದ’ ಗಾನ ಸುಧೆ ಹರಿಸಿದರು. ಶ್ರೋತ್ರವಿನ ಯೋಚನಾ ಲಹರಿಗೆ ತೆರೆದುಕೊಳ್ಳುವ ಪುರಾತನ ಶ್ರೀ ರಾಗ ಹಾಡಿದ ಅವರು, ‘ ಗಾಯನ ಕೇಳುಗರಿಗೆ ಸುಲಲಿತ ಹಾಗೂ ಇಂಪಾಗಿರಬೇಕು’ ಎಂದು ಕೇಳುವುದನ್ನೂ ಕಲಿಸಿದರು. ಆಲಿಸುವ ಮನಸ್ಸು ತಂಪಾಗಿರಬೇಕು ಎಂದು ನೆನಪಿಸಿದರು. ಶ್ರೀ ರಾಗದ ಮೂಲಕ ಮುಸ್ಸಂಜೆಯ ಹೊತ್ತಲ್ಲಿ ಬದ್ಧತೆ ಹಾಗೂ ಭಕ್ತಿಯನ್ನು ಮೂಡಿಸಿದರು. ಬಳಿಕ, ‘ಕಮಲೇ… ಕಮಲಾಲಯೇ ಕಮಲ ಭವಾದಿ ಸುರ ವಂದಿತ ಪದೇ… ತ್ರಿಗುಣಾಭಿಮಾನಿಯೇ’ ಎಂದು ಲಕ್ಷ್ಮೀ ಸ್ತುತಿ ಭಜಿಸಿದರು. ಪ್ರದೀಪ ಮತ್ತು ಮಿಶ್ರ ರಾಗದಲ್ಲಿ ಭಜಿಸಿದರು. ‘ಬಂದದ್ದು ಸರ್ಥಕ ಆತು. ನಾ ಹೆಂಗಾರ ಹಾಡ್ಲಿ… ಹಾಡ್ಲಿಕ್ಕಾ ಹುರಪು ಕೊಡ್ತೀರಲ್ಲಾ… ‘ ಎಂದು ಪ್ರೇಕ್ಷಕರ ಹುರುಪು ಕಂಡು ಕೃತಜ್ಞತೆ ವ್ಯಕ್ತಪಡಿಸಿದರು. ನಂತರ ವೆಂಕಟೇಶ್ ವಚನದತ್ತ ರಾಗ ಹೊರಳಿಸಿದರು. ‘ಅಕ್ಕಾ ಕೇಳವ್ವಾ ನಾ ಕನಸೊಂದ ಕಂಡೆ, ಅಕ್ಕಿ ಅಡಕೆ ಓಲೆ ತೆಂಗಿನಕಾಯಿ’ ಎಂದು ಅಕ್ಕಮಹಾದೇವಿ ವಚನಗಳನ್ನು ಹಾಡಿದರು. ‘ಕೂಗಿದರೂ ದನಿ ಕೇಳದೇ … ಕೃಷ್ಣಾ’ ಎಂದು ಬೀಮ ಪಾಲಸ ರಾಗದಲ್ಲಿ ಕೃಷ್ಣನ ಸ್ತುತಿಸಿದರು. ಪ್ರೇಕ್ಷಕರ ಕಂಡು ‘ಬರೋಬ್ಬರಿ ಆತ್ರಿ’ ಎಂದು ಸಂತಸ ವ್ಯಕ್ತಪಡಿಸಿದರು.ಅವರಿಗೆ ಅಪಾರ ಖ್ಯಾತಿ ತರಿಸಿದ ಕನಕದಾಸರ ಹರಿಭಕ್ತಿಯ ‘ತೊರೆದು ಜೀವಿಸಬಹದೇ ಹರಿ ನಿನ್ನ ಚರಣಗಳ, ಬರಿದೆ ಮಾತೇಕಿನ್ನು ಅರಿ ಪೇಳುವೆನಯ್ಯಾ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು’ ಎಂದಾಗ ಕೃಷ್ಣ ಭಕ್ತಿಯಲ್ಲಿ ಸಭಾಂಗಣವೇ ಭಾವಪರಶವಾಯಿತು. ಕರತಾಡನದ ಅಲೆ ಉಕ್ಕಿ ಬಂತು. ‘ತೊರೆದು ಜೀವಿಸ ಬಹುದೇ…’ ಎಂದು ಶ್ರೋತ್ರುಗಳು ದನಿ ನೀಡಿದರು. ‘ಆದಿಕೇಶವರಾಯ… ಎಂಬ ಏರುಗತಿಗೆ ಪ್ರೇಕ್ಷಕರು ಧನ್ಯರಾದರು.’ಇಲ್ಲಿನ ವಿದ್ಯರ್ಥಿಗಳು ಸಂಗೀತ ಆಸಕ್ತಿ ವ್ಯಕ್ತಪಡಿಸಿದರು. ನಿಮಗೆ ಕಲಿಕೆ ಜೊತೆ ಆಳ್ವಾಸ್ ನಲ್ಲಿ ಸಂಸ್ಕಾರ ಕೊಡುತ್ತಾರೆ. ಒಳ್ಳೆಯ ವಿದ್ಯಾ ಸಂಸ್ಥೆ’ ಎಂದು ವೆಂಕಟೇಶ್ ಶ್ಲಾಘಿಸಿದರು.ಒಂದು ಕಾಲದಲ್ಲಿ ಲತಾ ಮಂಗೇಶ್ಕರ್ ಸ್ವರದಲ್ಲಿ ಖ್ಯಾತಿ ಪಡೆದಿದ್ದ, ‘ಪಾವೋಜಿ ಮೈನೇ.. ರಾಮ ರತನ್ ಧನ್ ಪಾಯೋ..’ ಹಾಡಿದಾಗ ಮಹಿಳೆಯರೆಲ್ಲ ತಲೆದೂಗಿದರು.’ ಪರ್ವತಿಯೇ ದೇವಿಯೇ, ಗಿರಿಜೆಯೇ, ಕಲ್ಯಾಣಿಯೇ… ರ್ವ ಮಂಗಳ ದೇವಿಯೇ’… ಎನ್ನುತ್ತಾ ಶಂಕರನ ರಾಣಿ ಪರ್ವತಿಯ ಸ್ತುತಿಸಿದರು.‘ಒಂದು ಬಾರಿ ಸ್ಮರಣೆ ಸಾಲದೇ ಆನಂದತರ್ಥ ಪರ್ಣಪ್ರಜ್ಞರ ರ್ವಜ್ಞ ರಾಯರ … ಮಧ್ವ ಮುನಿಯ’ ಎಂದು ವಾದಿರಾಜರ ಸಾಲುಗಳನ್ನು ಬೈರವಿ ರಾಗದಲ್ಲಿ ಹಾಡಿ ತೆರೆ ಎಳೆದರು.ಬಳ್ಳಾರಿಯ ಲಕ್ಷ್ಮೀಪುರದ ೭೧ರ ಹರೆಯದ ಎಂ. ವೆಂಕಟೇಶ್ ಕುಮಾರ್ ಬಿದಿರೆಯ ನಾಡಲ್ಲಿ ದಾಸಭಕ್ತಿಯನ್ನೇ ಉಕ್ಕೇರಿಸಿದರು. ಮುಸ್ಸಂಜೆಯ ಹೊಂಗಿರಣದ ನಡುವೆ ರ್ಣಮಯ ಬೆಳಕಿನ ಚಿತ್ತಾರ ಹಾಗೂ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ್ದ ಬೃಹತ್ ಸಭಾಂಗಣದಲ್ಲಿ ಗ್ವಾಲಿಯರ್ ಘರಾಣಾದ ವೆಂಕಟೇಶ್ ಗಾನದ ರ್ಷಧಾರೆಯನ್ನೇ ಹರಿಸಿದರು.ಜನಪದ ಗಾಯನದ ಕುಟುಂಬದಿಂದ ಬಂದು, ಗದಗದ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಭಕ್ತಿ ಸಂಗೀತದ ಲಹರಿಯನ್ನು ನಾಡಿನಾದ್ಯಂತ ಹರಿಸಿದ ವೆಂಕಟೇಶರ ಹರಿಸ್ತುತಿಗೆ ಮಾರು ಹೋಗದವರಿಲ್ಲ. ಮಂಗಳವಾರ ಭಕ್ತಿಯ ವೈಭವ ಕಂಡಿದ್ದ ಪ್ರೇಕ್ಷಕರು ಬುಧವಾರ ಭಕ್ತಿ ಲಯದಲ್ಲಿ ಮುಳುಗಿದರು. ಸ್ವರ ಲೋಕದಲ್ಲಿ ಮಿಂದೆದ್ದರು.ಪಂಡಿತ್ ಭೀಮಸೇನ ಜೋಶಿ ಮೆಚ್ಚಿಗೆ ಸೂಚಿಸಿದ್ದ ಸ್ವರದ ಲಾಲಿತ್ಯಕ್ಕೆ ಸೇರಿದವರೆಲ್ಲ ಮೂಕಸ್ಮಿತ. ಹರಿಸ್ಮರಣೆ, ಭಕ್ತಿ ಸುಧೆ ಮತ್ತೆ ಅದೇ ನಿನಾದ..ಹರ್ಮೋನಿಯಂನಲ್ಲಿ ನರೇಂದ್ರ ಎಲ್. ನಾಯಕ್, ತಬಲಾದಲ್ಲಿ ಕೇಶವ ಜೋಶಿ ಮತ್ತು ವಿಘ್ನೇಶ್ ಕಾಮತ್ ಹಾಗೂ ತಾನ್ ಪುರಾ (ತಂಬೂರಿ)ದಲ್ಲಿ ರಮೇಶ ಕೋಲಕುಂದ ಮತ್ತು ರಾಘವ ಹೆಗಡೆ ಶಿರಸಿ ಹಾಗೂ ತಾಳದಲ್ಲಿ ವಿನೀತ್ ಭಟ್ ಕೋಟೇಶ್ವರ ಸಾಥ್ ನೀಡಿದರು. ಮಾಧವಿ ಮತ್ತು ಮೇಘ ಕರ್ಯಕ್ರಮ ನಿರೂಪಿಸಿದರು.