ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಸಹಕಾರದಲ್ಲಿ ಯುವ ಹಾಗೂ ಮಹಿಳಾ ವಿಭಾಗದ ನೇತೃತ್ವದಲ್ಲಿ ಕೆ ಎಸ್ ಹೆಗ್ಡೆ ವೈದ್ಯಕೀಯ ಸಂಸ್ಥೆ ದೇರಳಕಟ್ಟೆ ಇವರ ಸಹಭಾಗಿತ್ವದಲ್ಲಿ ಗುರುವಾಯನಕೆರೆ ಬಂಟರ ಭವನದಲ್ಲಿ ಬೃಹತ್ ರಕ್ತದಾನ ಶಿಬಿರವು ನವೆಂಬರ್ 24 ರಂದು ನಡೆಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಡಾ. ನವೀನ್ ಪಕ್ಕಳ ಎಂ.ಡಿ ಅನಸ್ತೇಷಿಯ ಸೀನಿಯರ್ ರೆಸಿಡೆಂಟ್ ಕೆ ಎಸ್ ಹೆಗ್ಡೆ ದೇರಳಕಟ್ಟೆ, ಡಾ. ಪಲ್ಲವಿ ಎಚ್ ಸೀನಿಯರ್ ರೆಸಿಡೆಂಟ್ ಡಿಪಾರ್ಟ್ಮೆಂಟ್ ಆಫ್ ಪ್ಯಾಥೋಲಜಿ ಕೆ ಎಸ್ ಹೆಗ್ಡೆ ದೇರಳಕಟ್ಟೆ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಸಾಮಾನಿ ಕರಂಬಾರು ಬೀಡು, ಯುವ ವಿಭಾಗದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಶೋಭಾ ವಿ ಶೆಟ್ಟಿ ಭಾಗವಹಿಸಿ ಶುಭ ಹಾರೈಸಿದರು.








































































































