ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಗೆ, ಸೂಕ್ತ ಮಾರ್ಗದರ್ಶನ, ಸಲಹೆಗಳು ಉತ್ತಮ ವೇಗೋತ್ಕರ್ಷದಂತೆ ಕೆಲಸ ಮಾಡಬಲ್ಲದು ಎಂಬುದಕ್ಕೆ ನಿತ್ಯಾನಂದ ಶೆಟ್ಟಿ ಮಂದಾರ್ತಿಯವರ ಸಾಧನೆಯೇ ಸಾಕ್ಷಿ. ಬೆಂಗಳೂರಿನ ದೊಡ್ಡ ಬಾಣಸವಾಡಿಯಲ್ಲಿ ‘ಉಡುಪಿ ಶ್ರೀ ಮಂದಾರ್ತಿ ವೈಭವ’ ಎಂಬ ಸುಸಜ್ಜಿತ ರೆಸ್ಟೋರೆಂಟ್ ಮತ್ತು ಪಾರ್ಟಿ ಹಾಲ್ ವ್ಯವಸ್ಥೆಗೊಳಿಸಿರುವ ನಿತ್ಯಾನಂದ ಶೆಟ್ಟಿಯವರು, ಆ ಸುತ್ತಲಿನ ಜನರ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ ಕೇಳಿದ ಕಡೆ ಗುಣಮಟ್ಟದ ಆಹಾರ ಸರಬರಾಜು ಮಾಡುವ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದು, ಬೆಂಗಳೂರಿನ ಯಾವುದೇ ಭಾಗಕ್ಕೆ ರುಚಿಕರ ಆಹಾರ, ತಿಂಡಿ ತಿನಿಸುಗಳನ್ನು ಸಮಯಕ್ಕೆ ಸರಿಯಾಗಿ ಸರಬರಾಜು ಮಾಡಬಲ್ಲರು.
ಇತ್ತೀಚೆಗೆ ದೊಡ್ಡ ಬಾಣಸವಾಡಿಯಲ್ಲಿ ಆರಂಭಗೊಂಡಿರುವ ‘ಉಡುಪಿ ಶ್ರೀ ಮಂದಾರ್ತಿ ವೈಭವ’ ಈಗಾಗಲೇ ಜನ ಮೆಚ್ಚುಗೆ ಗಳಿಸಿದ್ದು, ಇಲ್ಲಿನ ತಿನಿಸುಗಳ ರುಚಿಗೆ ಜನರು ಮಾರು ಹೋಗಿದ್ದಾರೆ. ದೊಡ್ಡ ಬಾಣಸವಾಡಿಯಲ್ಲಿ ‘ಉಡುಪಿ ಶ್ರೀ ಮಂದಾರ್ತಿ ವೈಭವ, ರೆಸ್ಟೋರೆಂಟ್ ಆರಂಭಿಸಲು ಸ್ಪೂರ್ತಿ ಎಲ್ಲಿಂದ ಬಂತು ಎಂದು ಕೇಳಿದಾಗ, ಅವರಾಡಿದ ಮಾತುಗಳು ಹೃದಯಸ್ವರ್ಶಿ. ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ನನ್ನಲ್ಲಿದ್ದ ಉದ್ಯಮಶೀಲತೆಯನ್ನು ಗುರುತಿಸಿ, ನೀವು ಒಂದು ರೆಸ್ಟೋರೆಂಟ್ ಮತ್ತು ರೆಸ್ಟೋರೆಂಟ್ ಚೈನ್ ನ್ನು ಏಕೆ ಪ್ರಾರಂಭಿಸಬಾರದು? ತಕ್ಷಣ ಪ್ರಾರಂಭಿಸಿ, ನಿಮ್ಮಿಂದ ಈ ಕೆಲಸ ಸಾಧ್ಯ ಎಂದು ಹುರಿದುಂಬಿಸಿದರು. ಮಾತ್ರವಲ್ಲದೇ ಹಲವು ಬಾರಿ ಮುಖತಃ ಮತ್ತು ಫೋನ್ ಮೂಲಕ ಈ ಕುರಿತು ನೆನಪಿಸಿ, ನಾನು ರೆಸ್ಟೋರೆಂಟ್ ಆರಂಭಿಸುವ ತನಕವೂ ಬಿಡಲಿಲ್ಲ. ಅವರ ಸ್ಪೂರ್ತಿಯುತ ಮಾತುಗಳೇ ಇಂದು ನನ್ನನ್ನು ಈ ಉದ್ಯಮ ಆರಂಭಿಸಲು ಕಾರಣ ಎಂದು ಕೃತಜ್ಞತೆಯಿಂದ ತನಗೆ ಸ್ಪೂರ್ತಿ ನೀಡಿದ ವಿಶ್ವೇಶ್ವರ ಭಟ್ ಅವರನ್ನು ನೆನಪಿಸಿಕೊಳ್ಳುತ್ತಾರೆ ನಿತ್ಯಾನಂದ ಶೆಟ್ಟಿ ಮಂದಾರ್ತಿ.
ಕಳೆದ ಹಲವಾರು ವರ್ಷಗಳಿಂದ, ನಿತ್ಯಾನಂದ ಶೆಟ್ಟಿಯವರು ದುಬೈನ ಒಂದು ಸ್ಟಾರ್ ಹೋಟೆಲ್ ನಲ್ಲಿ ಮ್ಯಾನೇಜರ್ ಹುದ್ದೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದರು. ಅಲ್ಲಿಗೆ ಭೇಟಿ ನೀಡಿದಾಗ ವಿಶ್ವೇಶ್ವರ ಭಟ್ ಅವರು, ನಿತ್ಯಾನಂದ ಶೆಟ್ಟಿಯವರ ಕ್ರಿಯಾಶೀಲತೆ, ಚುರುಕಾಗಿ ಜವಾಬ್ದಾರಿಯನ್ನು ಓಡಾಡುತ್ತಾ ಕೆಲಸ ನಿರ್ವಹಿಸುವ ರೀತಿಯನ್ನು ಗುರುತಿಸಿ, ‘ನೀವು ರೆಸ್ಟೋರೆಂಟ್ ಚೈನನ್ನು ಸ್ಥಾಪಿಸಿ’ ಎಂದು ಸಲಹೆ ನೀಡಿ, ಹುರಿದುಂಬಿಸಿ ಅದಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡಿದರು. ಆ ಮಾತುಗಳೇ ಇಂದು ದೊಡ್ಡ ಬಾಣಸವಾಡಿಯ ‘ಉಡುಪಿ ಶ್ರೀ ಮಂದಾರ್ತಿ ವೈಭವ’ ರೆಸ್ಟೋರೆಂಟ್ ತಲೆ ಎತ್ತಿ ನಿಲ್ಲಲು ಕಾರಣವಾಗಿದೆ.
ಅದಕ್ಕೂ ಮುಂಚೆ ಬೆಂಗಳೂರಿನಲ್ಲಿ ಆರೆಂಟು ವರ್ಷಗಳ ಕಾಲ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡಿದ ಅನುಭವ ನಿತ್ಯಾನಂದ ಶೆಟ್ಟಿಯವರಿಗಿದೆ. 2024 ರ ಜುಲೈ ತಿಂಗಳಲ್ಲಿ, ದೊಡ್ಡ ಬಾಣಸವಾಡಿಯಲ್ಲಿ ರೆಸ್ಟೋರೆಂಟ್ ಆರಂಭಿಸುವಾಗ, ಈ ಅನುಭವವೂ ಅವರಿಗೆ ಅನುಕೂಲವಾಗಿ ಒದಗಿ ಬಂತು. ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಶೈಲಿಯ ಸಸ್ಯಹಾರಿ ತಿಂಡಿ ತಿನಿಸುಗಳನ್ನು ರುಚಿಕಟ್ಟಾಗಿ ಉಣಬಡಿಸುತ್ತಿರುವ ಈ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಹಾಲ್ (ಮೊದಲ ಮಹಡಿ) ಮತ್ತು ಡೈನಿಂಗ್ ಹಾಲ್ (ಎರಡನೇ ಮಹಡಿ) ಇದ್ದು, ನೆಲ ಮಹಡಿಯಲ್ಲಿ ಸ್ವಸಹಾಯ ಮತ್ತು ಟೇಬಲ್ ನಲ್ಲಿ ಕುಳಿತು ತಿಂಡಿ ತಿನಿಸುಗಳನ್ನು ಸೇವಿಸುವ ವ್ಯವಸ್ಥೆ ಇದೆ.
‘ಸಾಧ್ಯವಾದಷ್ಟು ಅಥೆಂಟಿಕ್ ರುಚಿ ಇರುವ ತಿಂಡಿ ತಿನಿಸುಗಳನ್ನು ತಯಾರಿಸುವುದು ನಮ್ಮ ಗುರಿ. ಅದಕ್ಕಾಗಿ, ತುಸು ಹೆಚ್ಚು ವೆಚ್ಚವಾದರೂ ಪರವಾಗಿಲ್ಲ, ಗ್ರಾಹಕರಿಗೆ ಒರಿಜಿನಲ್ ರುಚಿಯ ತಿನಿಸುಗಳನ್ನು ಪೂರೈಸುತಿದ್ದೇವೆ’ ಎನ್ನುವ ನಿತ್ಯಾನಂದ ಶೆಟ್ಟಿಯವರು ಅದನ್ನು ಇನ್ನಷ್ಟು ವಿವರಿಸುತ್ತಾರೆ. ಉಡುಪಿ ಹೋಟೆಲ್ ಗಳಲ್ಲಿ ಮೂರು ದಶಕಗಳ ಹಿಂದೆ ಇದ್ದಂತಹ ಅಥೆಂಟಿಕ್ ರುಚಿಯನ್ನು ಈಗ ನಮ್ಮ ಉಡುಪಿ ಮಂದಾರ್ತಿ ವೈಭವದಲ್ಲಿ ಕಾಣಬಹುದು. ಮೆಂತೆ ಹಾಕಿ ಆರು ಗಂಟೆ ಹುದುಗು ಬರಿಸಿದ ದೋಸೆ ಹಿಟ್ಟಿನಿಂದ ದೋಸೆ ತಯಾರಿಸುವುದು ನಮ್ಮ ಸ್ಪೆಷಾಲಿಟಿ. ಈಚಿನ ದಿನಗಳಲ್ಲಿ ಫಾಸ್ಟ್ ಫುಡ್ ನ ಕೆಲವು ಘಟಕಗಳು, ಬೇಗನೆ ಹುದುಗು ಬರಿಸುವ ಕೆಲವು ಉಪಾಯಗಳನ್ನು ಕಂಡುಕೊಂಡಿದ್ದಾರೆ. ಅದರಿಂದ ರುಚಿ ಬದಲಾಗುತ್ತದೆ. ನಮ್ಮ ರೆಸ್ಟೋರೆಂಟ್ ನ ದೋಸೆ, ಸಾಂಬಾರು, ಉತ್ತರ ಭಾರತೀಯ ತಿನಿಸುಗಳೆಲ್ಲವೂ ಅಥೆಂಟಿಕ್ ರುಚಿಯನ್ನು ಹೊಂದಿರುವುದನ್ನು ಕಾಣಬಹುದು ಎನ್ನುವ ನಿತ್ಯಾನಂದ ಶೆಟ್ಟಿಯವರಿಗೆ ನಮ್ಮ ಊರಿನ ತಿಂಡಿ ತಿನಿಸುಗಳನ್ನು ಬೆಂಗಳೂರಿನ ಗ್ರಾಹಕರಿಗೆ ಪರಿಚಯಿಸುವ ಅದಮ್ಯ ಉತ್ಸಾಹವಿದೆ. ದುರ್ಗಾಪರಮೇಶ್ವರಿ ಅಮ್ಮನವರ ದೇಗುಲವಿರುವ ಉಡುಪಿ ಜಿಲ್ಲೆಯ ಮಂದಾರ್ತಿ ಊರಿನವರಾದ ನಿತ್ಯಾನಂದ ಶೆಟ್ಟಿಯವರು ನಮ್ಮ ಊರಿನ ದೇವತೆಯ ನೆನಪಿನಲ್ಲಿ ನಮ್ಮ ರೆಸ್ಟೋರೆಂಟ್ ಹೆಸರನ್ನು ಇಟ್ಟಿದ್ದು ಯಾವುದೇ ಕೃತಕ ರಾಸಾಯನಿಕ ರುಚಿಕಾರಕಗಳನ್ನು ಬಳಸದೇ ರುಚಿಕರ ತಿಂಡಿ ತಿನಿಸುಗಳನ್ನು ತಯಾರಿಸುವ ಸಂಕಲ್ಪ ಹೊತ್ತಿದ್ದಾರೆ.
ಗ್ರಾಹಕರಿಗೆ ರುಚಿಕರ ತಿನಿಸುಗಳನ್ನು ಒದಗಿಸುವ ನಿಟ್ಟಿನಲ್ಲಿ ನಿಮ್ಮ ಮುಂದಿನ ಯೋಜನೆಗಳೇನು ಎಂದಾಗ, ತಮಗೆ ಸ್ಪೂರ್ತಿ ನೀಡಿ, ಮಾರ್ಗದರ್ಶನ ನೀಡಿದ ವಿಶ್ವೇಶ್ವರ ಭಟ್ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ನಿತ್ಯಾನಂದ ಶೆಟ್ಟಿಯವರು. ‘ಉಡುಪಿ ಶ್ರೀ ಮಂದಾರ್ತಿ ವೈಭವ’ ಹೆಸರಿನಲ್ಲಿ ಚೈನ್ ಆಫ್ ರೆಸ್ಟೋರೆಂಟ್ ಮಾಡುವ ಯೋಜನೆ ಇದೆ. ಅದರ ಭಾಗವಾಗಿ ಕೆಲವು ಕಡೆ ಕಾಫಿ ಶಾಪ್ ಗಳನ್ನು ಈಗಾಗಲೇ ಆರಂಭಿಸಿದ್ದೇವೆ. ಗುಣಮಟ್ಟದ ತಿಂಡಿ ತಿನಿಸುಗಳನ್ನು ತಯಾರಿಸುವುದು ನಮ್ಮ ಮುಖ್ಯ ಗುರಿ. ಇದು ಗ್ರಾಹಕರಿಗೂ ಇಷ್ಟವಾಗಿದೆ ಮತ್ತು ಎಲ್ಲರ ಆರೋಗ್ಯ ಕಾಪಾಡಲು ಸಹ ಸಹಕಾರಿ ಎನ್ನುವ ನಿತ್ಯಾನಂದ ಶೆಟ್ಟಿಯವರು ರುಚಿಕರ ತಿನಿಸುಗಳನ್ನು ನೀಡಿ ಗ್ರಾಹಕರ ಮನ ಗೆಲ್ಲುವ ಹಾದಿಯಲ್ಲಿದ್ದಾರೆ.
ಮಂದಾರ್ತಿ ವೈಭವ ರೆಸ್ಟೋರೆಂಟ್ ನ ಮಹಡಿಯಲ್ಲಿರುವ ಪಾರ್ಟಿ ಹಾಲ್ ನಲ್ಲಿ 200 ಕ್ಕಿಂತ ಹೆಚ್ಚು ಜನ ಸೇರಿ ಕಾರ್ಯಕ್ರಮ ನಡೆಸಬಹುದು. ನೀವೂ ಸಹ ದೊಡ್ಡ ಬಾಣಸವಾಡಿಯ ‘ಉಡುಪಿ ಶ್ರೀ ಮಂದಾರ್ತಿ ವೈಭವ’ದಲ್ಲಿ ದೋಸೆ, ಇಡ್ಲಿ, ಪನೀರ್ ಬಟರ್ ಮಸಾಲಾ, ವೆಜ್ ಬಿರಿಯಾನಿ, ಸಿಹಿ ತಿನಿಸುಗಳು, ದಕ್ಷಿಣ ಮತ್ತು ಉತ್ತರ ಭಾರತೀಯ ತಿನಿಸುಗಳ ರುಚಿಯನ್ನು ಒಮ್ಮೆ ಸವಿದು ನೋಡಿ.