ಸುರತ್ಕಲ್ ಎನ್ ಐಟಿಕೆ (ಕೆಆರ್ ಇಸಿ) ಯ ನಿವೃತ್ತ ಪ್ರಾಂಶುಪಾಲ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿದ್ದ ಡಾ| ಪಿ. ಸುಧಾಕರ ಶೆಟ್ಟಿ (86) ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 12ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿ ಮಣಿಪಾಲ ಕೆ.ಎಂ.ಸಿ.ಯ ಗೈನಕಾಲಜಿ ವಿಭಾಗದ ಪ್ರೊಫೆಸರ್ ಹಾಗೂ ಯೂನಿಟ್ ಹೆಡ್ ಆಗಿರುವ ಡಾ. ಜ್ಯೋತಿ ಶೆಟ್ಟಿ, ಅಳಿಯ ಅಶೋಕ್ ಕುಮಾರ್ ಶೆಟ್ಟಿ, ಪುತ್ರ ಬಂಟ್ವಾಳ ನರಿಕೊಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೀವನ್ ಶೆಟ್ಟಿ ಅವರನ್ನು ಅಗಲಿದ್ದಾರೆ. ಅವರು ಮೂಲತಃ ಪಡುಬಿದ್ರಿ ಕೆರಮ ಮೂಡು ಮನೆಯವರಾಗಿದ್ದು, ಪ್ರಸ್ತುತ ಸುರತ್ಕಲ್ ನ ಕೇಶವ ಚೌಟ ಕಂಪೌಂಡ್ ನಿವಾಸಿಯಾಗಿದ್ದರು
ಹಿಂದಿನ ಕೆ.ಆರ್.ಇ.ಸಿಯಲ್ಲಿ ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ನಲ್ಲಿ ಪ್ರೊಫೆಸರ್ ಆಗಿ, ಅನಂತರ ಹೆಡ್ ಆಫ್ ದ ಡಿಪಾರ್ಟ್ಮೆಂಟ್ ಆಗಿ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಶಿವಮೊಗ್ಗ ಜವಹರಲಾಲ್ ನೆಹರೂ ನ್ಯಾಷನಲ್ ಕಾಲೇಜು ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾಗಿ ಹಾಗೂ ವಾಮಂಜೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಇದರ ಪ್ರಥಮ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ತಾಂತ್ರಿಕ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಬಂಧ ಮಂಡಿಸಿ ಜನಾನುರಾಗಿಯಾಗಿದ್ದರು. ಅಮೆರಿಕದಲ್ಲಿ ಪೋಸ್ಟ್ ಡಾಕ್ಟರೇಟ್ ಆಗಿ ಸಂಶೋಧನಾ ಕ್ಷೇತ್ರದಲ್ಲೂ ಸೇವೆ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸರಕಾರದ ಅನೇಕ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ ಅವರು ಸರಕಾರಕ್ಕೆ ತಾಂತ್ರಿಕ ಸಲಹೆ ನೀಡುತ್ತಿದ್ದರು. ಮಣಿಪುರ ಕುಂತಳ ನಗರ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಕರೆಸ್ಪಾಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.