ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಮನವಿ ಪತ್ರವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಬಿಡುಗಡೆ ಮಾಡಿದರು. ಒಕ್ಕೂಟದ ಮೂಲಕ ಈ ಧಾರ್ಮಿಕ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಐಕಳ ಹರೀಶ್ ಶೆಟ್ಟಿ ನುಡಿದರು.

ಈ ಸಂದರ್ಭದಲ್ಲಿ ವೇದವ್ಯಾಸ ಉಡುಪ, ಮುಂಬಯಿ ಸಮಿತಿ ಗೌರವಾಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಮಾಗಂದಡಿ, ನಿತಿನ್ ಶೆಟ್ಟಿ ದೇವಸ್ಯ ಕೊಡೆತ್ತೂರುಗುತ್ತು, ಶ್ರೀಧರ ಆಳ್ವ ಮಾಗಂದಡಿ, ಶ್ರೀ ಜಯರಾಮ ಮುಕ್ಕಾಲ್ದಿ, ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬ್ರಹ್ಮಕಲಶದ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಮೋಹನ್ ಶೆಟ್ಟಿ ಮೂಡು ದೇವಸ್ಯ, ಬ್ರಹ್ಮಕಲಶ ಸಮಿತಿಯ ಕೋಶಾಧಿಕಾರಿ ಶೈಲೇಶ್ ಅಂಚನ್ ಉಪಸ್ಥಿತರಿದ್ದರು.








































































































