ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ಎನ್ಐಟಿಕೆ ಸುರತ್ಕಲ್ ಇದರ ಆಡಳಿತ ಮಂಡಳಿಗೆ ಉದ್ಯಮಿ ಮತ್ತು ಸುಪ್ರಜಿತ್ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಕೆ. ಅಜಿತ್ ಕುಮಾರ್ ರೈ ಇವರನ್ನು ರಾಜ್ಯ ಸರಕಾರದ ಪ್ರತಿನಿಧಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಹಾಗೂ ಕೆನಡಾದ ಡಾಲ್ಹೌಸಿ ವಿಶ್ವವಿದ್ಯಾಲಯದಿಂದ ಕೈಗಾರಿಕಾ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.

ಇವರ ನೇತೃತ್ವದ ಸುಪ್ರಜಿತ್ ಗ್ರೂಪ್ ಆಫ್ ಕಂಪೆನಿಯು ಆಟೋಮೋಟಿವ್ ಲೈಟಿಂಗ್, ಹ್ಯಾಲೊಜೆನ್ ಬಲ್ಬ್ಗಳು ಮತ್ತು ಕೇಬಲ್ ತಯಾರಕ ಮತ್ತು ದ್ವಿಚಕ್ರ ಕೇಬಲ್ ಮಾರುಕಟ್ಟೆಯಲ್ಲಿ ಜಾಗತಿಕ ನಾಯಕ ಸಂಸ್ಥೆಯಾಗಿದ್ದು ಚೀನಾ, ಯುಎಸ್ಎ, ಮೆಕ್ಸಿಕೊ, ಇಂಗ್ಲೆಂಡ್, ಹಂಗೇರಿ, ಸ್ಲೊವೇನಿಯಾ, ಲಕ್ಸೆಂಬರ್ಗ್ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳಲ್ಲಿ ವ್ಯವಹಾರ ಹೊಂದಿದೆ.

ವಿದ್ಯಾರ್ಥಿ ವೇತನದ ಮೂಲಕ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು, ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಉನ್ನತೀಕರಣದಲ್ಲಿ ನೆರವು, ವಿಟ್ಲದ ಶಾಲೆಗೆ ಪೀಟೋಪಕರಣ ಸಹಿತ ಕಟ್ಟಡ ನಿರ್ಮಾಣ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ, ವಿವಿಧ ವೈದ್ಯಕೀಯ ನೆರವು ಅಗತ್ಯವಿರುವವರಿಗೆ ಆರೈಕೆ ಹಾಗೂ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಮೂಲಕ ಸಾಮಾಜಿಕ ಕಾಳಜಿಯನ್ನು ಕೆ. ಅಜಿತ್ ಕುಮಾರ್ ರೈ ಹೊಂದಿದ್ದಾರೆ.
		




































































































