ದ.ಕ ಮತ್ತು ಉಡುಪಿ ಜಿಲ್ಲೆಯ ಆಯ್ದ ಐವತ್ತು ಗ್ರಾಮಗಳಲ್ಲಿ ಶೀಘ್ರದಲ್ಲೇ ಉಚಿತ ಕಟೀಲ್ ಸಂಚಾರಿ ಬೇಬಿ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಪುಣೆ ಹೇಳಿದರು. ಬಂಟರ ಮಹಿಳಾ ಘಟಕ ಮೂಡುಬಿದಿರೆ ಮತ್ತು ನಡ್ಯೋಡಿ ಮಹಿಳಾ ಮಂಡಲ ಮಾರ್ಪಾಡಿ ಕಲ್ಲಬೆಟ್ಟು ವತಿಯಿಂದ ಆಳ್ವಾಸ್ ಹೆಲ್ತ್ ಸೆಂಟರ್ ಸಹಕಾರದೊಂದಿಗೆ ನಡ್ಯೋಡಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ನಡ್ಯೋಡಿ ಶಾಲೆಯಲ್ಲಿ ಒಟ್ಟು 28 ಮಕ್ಕಳ ತಪಾಸಣೆ ನಡೆಸಲಾಯಿತು. ನಡ್ಯೋಡಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು. ಮೂಡಬಿದಿರೆ ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಶೆಟ್ಟಿ, ಕಾರ್ಯದರ್ಶಿ ಸೌಮ್ಯ ಎಸ್. ಶೆಟ್ಟಿ ಹಾಗೂ ಸದಸ್ಯರು, ನಡ್ಯೋಡಿ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಪಿ. ಶೆಟ್ಟಿ, ಕಾರ್ಯದರ್ಶಿ ಹೇಮಾವತಿ ಆರ್. ಪೂಜಾರಿ ಮತ್ತಿತರರು ಭಾಗವಹಿಸಿದ್ದರು.