ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಸಿಬಿಎಸ್ಸಿ ಬೋರ್ಡ್ ಪ್ರಾಯೋಜಕತ್ವದಲ್ಲಿ ಅ.10 ರಂದು ಶಿಕ್ಷಕರಿಗೆ ಸೈಬರ್ ಸುರಕ್ಷತೆ ಮತ್ತು ಭದ್ರತೆಯ ಕುರಿತು ‘ಸಾಮರ್ಥ್ಯ ಅಭಿವೃದ್ಧಿ’ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಪೆÇೀದಾರ್ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲರಾದ ಗಿರೀಶ್ ಕುಮಾರ್ ಹಾಗೂ ಗಂಜಿಮಠದ ರಾಜ್ ಅಕಾಡೆಮಿ ಹೈಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಪ್ರವೀಣಾ ಶೆಟ್ಟಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಸೈಬರ್ ಭದ್ರತೆ , ಬ್ಯಾಂಕ್ ವಂಚನೆ, ಸೈಬರ್ ಕ್ರೈಮ್, ಕಂಪ್ಯೂಟರ್ಫೋರೆನಿಕ್ಸ್, ಸೈಬರ್ ಜಾಗೃತಿ, ಸೈಬರ್ ಕಾನೂನು ಮತ್ತು ಕಾಯ್ದೆ ಮುಂತಾದ ವಿಷಯಗಳ ಕುರಿತು ಪರಿಪೂರ್ಣ ಮಾಹಿತಿ ನೀಡಿದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಾವೆಲ್ಲರೂ ಇಂದು ಕೇವಲ ಒಂದು ದೇಶದ ಪ್ರಜೆಗಳಲ್ಲ, ಜೊತೆಗೆ ಸೈಬರ್ ಪ್ರಪಂಚದ ಸದಸ್ಯರಾಗಿದ್ದೇವೆ ಹಾಗಾಗಿ ಅದರ ಅನುಕೂಲ ಹಾಗೂ ಅನಾನುಕೂಲಗಳ ಅರಿವು ಇರಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಅಂತರ್ಜಾಲದ ಯುಗದಲ್ಲಿ ಬದುಕುತ್ತಿರುವ ನಮಗೆ ಸಾಮಾಜಿಕ ಮಾಧ್ಯಮಗಳ ಒಳಿತು ಕೆಡುಕುಗಳ ಪರಿಜ್ಞಾನ ಅನಿವಾರ್ಯವಾಗಿದ್ದು ವಿದ್ಯಾರ್ಥಿಗಳಿಗೆ ಅದರ ಬಗ್ಗೆ ತಿಳುವಳಿಕೆ ಮೂಡಿಸಬೇಕೆಂದರು. ಕಾರ್ಯಾಗಾರದಲ್ಲಿ ಸಂಸ್ಥೆಯ ಶಿಕ್ಷಕವೃಂದ ಉಪಸ್ಥಿತರಿದ್ದು ವಿವಿಧ ಚಟುವಟಿಕೆಗಳ ಮೂಲಕ ಪ್ರಾತ್ಯಕ್ಷಿಕ ಅನುಭವ ಪಡೆದುಕೊಂಡರು.