ಸುರತ್ಕಲ್ ಗೋವಿಂದ ದಾಸ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಎನ್ ಸಿ ಸಿ ವಿಭಾಗದ ಕ್ಯಾಪ್ಟನ್ ಸುಧಾ ಚಂದ್ರಶೇಖರ್ ಶೆಟ್ಟಿ ಇವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ “ಭಾರತದ ಪ್ರಜಾತಂತ್ರದಲ್ಲಿ ಸಮಾಜವಾದಿಗಳ ಅನುಸಂಧಾನ, ಭಾರತದ ಪ್ರಜಾತಂತ್ರದಲ್ಲಿ ಸಮಾಜವಾದಿಗಳ ವಿಶೇಷ ನಡುಪ್ರವೇಶಗಳ ಮರು ಪರಿಶೀಲನೆ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಹೆಚ್ ಡಿ ಪದವಿಯನ್ನು ನೀಡಿ ಗೌರವಿಸಿದೆ.
ಇವರು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ರಾಜಾರಾಮ್ ತೋಳ್ಪಾಡಿ ಅವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ರಚಿಸಿದ್ದರು. ಇವರು ಉತ್ತಮ ಕಾರ್ಯಕ್ರಮ ನಿರೂಪಕಿಯೂ ಆಗಿದ್ದಾರೆ.