ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆ. ೫ ರಂದು ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಸುಮ ಅಶೋಕ್ ಕುಮಾರ್ ರೈ “ರೈ ಎಸ್ಟೇಟ್ ಕೋಡಿಂಬಾಡಿ”ರವರು ಮಾತನಾಡಿ ತಾಲೂಕು ಮಹಿಳಾ ಬಂಟರ ಸಂಘದವರು ಎಲ್ಲರೂ ಒಂದುಗೂಡಿ ಅತ್ಯುತ್ತಮವಾದ ರೀತಿಯಲ್ಲಿ ಆಟಿ ಆಚರಣೆಯನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷ ತಂದಿದೆ. ಮಹಿಳಾ ಬಂಟರು ಸಂಘಟನೆಯ ಮೂಲಕ ಸಮಾಜದಲ್ಲಿ ಸಂಘಟಿತರಾಗುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಮಹಿಳಾ ಬಂಟರ ಸಂಘದವರು ಅತ್ಯುತ್ತಮವಾದ ಕಾರ್ಯಕ್ರಮವನ್ನು ಸಂಘಟಿಸಿ, ಹೆಸರನ್ನು ಪಡೆದಿದ್ದಾರೆ. ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಮಹಿಳಾ ಬಂಟರ ಸಂಘದಲ್ಲಿ ತುಂಬಾ ಪ್ರತಿಭಾವಂತರು, ಸಂಘಟಕರು ಇದ್ದಾರೆ, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಬಹೃತ್ ಮಹಿಳಾ ಬಂಟರ ಸಮಾವೇಶವನ್ನು ಆಯೋಜನೆ ಮಾಡಿ ಎಂದು ಸಲಹೆಯನ್ನು ನೀಡಿ, ಮಾತೃ ಸಂಘದಿಂದ ಪೂರ್ಣ ಸಹಕಾರವನ್ನು ಕಾರ್ಯಕ್ರಮಕ್ಕೆ ನೀಡುತ್ತೇವೆ ಎಂದರು.
ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಮಹಿಳಾ ಬಂಟರ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವಂತೆ ಸಲಹೆಯನ್ನು ನೀಡಿ, ತಾಲೂಕು ಬಂಟರ ಸಂಘದ ವತಿಯಿಂದ ಆ. ೧೩ ರಂದು ಬಂಟರ ಭವನದಲ್ಲಿ ನಡೆಯುವ ಆಟಿಡೊಂಜಿ ದಿನ ಹಾಗೂ ಸಾಧಕರಿಗೆ ಚಿನ್ನದ ಪದಕ ಪುರಸ್ಕಾರಕ್ಕೆ ಕಾರ್ಯಕ್ರಮಕ್ಕೆ ಮಹಿಳಾ ಬಂಟರ ಸಂಘದ ಎಲ್ಲರೂ ಪೂರ್ಣ ರೀತಿಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ತಾಲೂಕು ಮಹಿಳಾ ಬಂಟರ ಸಂಘದ ಕಾರ್ಯಚಟುವಟಿಕೆಗಳು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿರವರು ಮಾತನಾಡಿ ಸಂಘದಿಂದ ಸಮಾಜಮುಖಿ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಆಟಿಕೂಟ ಸಮಾರಂಭಕ್ಕೆ ಶಾಸಕ ಆಶೋಕ್ ಕುಮಾರ್ ರೈ ಭೇಟಿ ನೀಡಿ, ಮಹಿಳಾ ಬಂಟರ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ತಾಲೂಕು ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಂಟರ ಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿಯ ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡ ಉಪಸ್ಥಿತರಿದ್ದರು.
ತಾಲೂಕು ಮಹಿಳಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಮಾತನಾಡಿ ತಾಲೂಕು ಮಹಿಳಾ ಬಂಟರ ಸಂಘದಿಂದ ಆರೋಗ್ಯ ಮತ್ತು ಶಿಕ್ಷಣ ಮಾಹಿತಿ, ವೈದ್ಯಕೀಯ ನೆರವು, ಮದುವೆ, ಮನೆ ನಿರ್ಮಾಣ ಮತ್ತು ಮನೆ ದುರಸ್ತಿ ಕಾರ್ಯಕ್ಕೆ ಧನ ಸಹಾಯವನ್ನು ನೀಡಲಾಗಿದೆ ಎಂದರು. ಕೋಶಾಧಿಕಾರಿ ವಾಣಿ ಶೆಟ್ಟಿ ನೆಲ್ಯಾಡಿ ವಂದಿಸಿದರು. ಸಮಾರಂಭದಲ್ಲಿ ಮಹಿಳಾ ಬಂಟರ ಸಂಘದ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಬಂಟರ, ಯುವ ಮತ್ತು ವಿದ್ಯಾರ್ಥಿ ಬಂಟರ ಸಂಘದವರು ಭಾಗವಹಿಸಿದರು.
ಆಟಿಕೂಟಕ್ಕೆ ೫೦ ಬಗೆಯ ತಿನಿಸುಗಳು ಆಟಿಕೂಟಕ್ಕೆ ರುಚಿಕರವಾದ ೫೦ ಬಗೆಯ ವಿವಿಧ ಬಗೆಯ ತಿನಸುಗಳನ್ನು ಸಿದ್ಧಪಡಿಸಲಾಗಿತ್ತು. ಸಂಘದ ಸದಸ್ಯರುಗಳು ನಾನಾ ಬಗೆಯ ಬೇರೆ ಬೇರೆ ತಿನಸುಗಳನ್ನು ಮನೆಯಲ್ಲಿಯೇ ತಯಾರಿಸಿ, ತಂದಿದ್ದು, ಸಂಘದ ಸದಸ್ಯರುಗಳ ಏಕತೆಯ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಬಿತಾ ಭಂಡಾರಿ (ಅಧ್ಯಕ್ಷರು ಮಹಿಳಾ ಬಂಟರ ಸಂಘ ಪುತ್ತೂರು) ಹೇಳಿದರು.
ತಾಲೂಕು ಯುವ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆ
ತುಳುನಾಡ ಬಂಟೆರೆ ಪರ್ಬ ಕಾರ್ಯಕ್ರಮದ ಲೆಕ್ಕಪತ್ರ ಮಂಡನೆ :
ತಾಲೂಕು ಯುವ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಬಂಟರ ಭವನದ ಕಚೇರಿಯಲ್ಲಿ ಜರಗಿತು. ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈಯವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಜು. ೨೩ ರಂದು ಜರಗಿದ ತುಳುನಾಡ ಬಂಟೆರೆ ಪರ್ಬ ಕಾರ್ಯಕ್ರಮ ಅದ್ದೂರಿಯಾಗಿ ನಡೆದು ಜನಮಾನಸದಲ್ಲಿ ಹೆಸರನ್ನು ಪಡೆದಿದೆ. ಈ ಮೂಲಕ ಯುವ ಬಂಟರ ಸಂಘಕ್ಕೆ ಹೆಸರು ಬಂದಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಕಾರ್ಯಕ್ರಮದ ಲೆಕ್ಕಪತ್ರವನ್ನು ಮಂಡನೆ ಮಾಡಿ ಸಭೆಯಲ್ಲಿ ಅನುಮೋಧನೆ ಪಡೆಯಲಾಯಿತು. ಕಾರ್ಯಕ್ರಮದ ಸಂಚಾಲಕ ಹರ್ಷಕುಮಾರ್ ರೈ ಮಾಡಾವು, ಯುವ ಬಂಟರ ಸಂಘದ ಸಂಯೋಜಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಕೆ.ಸಿ.ಅಶೋಕ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಪ್ರಕಾಶ್ ರೈ ಸಾರಕರೆ, ಪದಾಧಿಕಾರಿಗಳಾದ ಮನ್ಮಥ ಶೆಟ್ಟಿ ಪುತ್ತೂರು, ನವೀನ್ ರೈ ಪಂಜಳ, ಪ್ರಜನ್ ಶೆಟ್ಟಿ ಕಂಬಳತಡ್ಡ, ಶುಭ ರೈ, ಸಂದೇಶ್ ರೈ, ಉಮಾಪ್ರಸಾದ್ ರೈ ನಡುಬೈಲು, ಸಂತೋಷ್ ರೈ ಬರೆಪ್ಪಾಡಿ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡ, ಬಂಟರ ಭವನದ ರವಿಚಂದ್ರ ರೈ ಕುಂಬ್ರ ಹಾಗೂ ಭಾಸ್ಕರ್ ರೈ ಉಪಸ್ಥಿತರಿದ್ದರು.