ಅ.೧೩ ರಂದು ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಆಟಿದ ಕೂಟ ಹಾಗೂ ಚಿನ್ನದ ಪದಕ ನೀಡಿ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಅವರು ಜು. ೧೮ ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿದ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ ಬಂಟರ ಸಂಘದ ಆಶ್ರಯದಲ್ಲಿ ಜರಗಿದ ಶಾಸಕ ಆಶೋಕ್ ರೈ ಅವರ ಅಭಿನಂದನಾ ಸಮಾರಂಭವು ಅಭೂತ ಪೂರ್ವ ಯಶಸ್ಸು ಕಂಡಿದ್ದು, ಇದೇ ರೀತಿಯಲ್ಲಿ ಮಂದೆಯೂ ಬಂಟ ಸಮಾಜ ಬಾಂಧವರು ಹೆಚ್ಚಿನ ಪ್ರೋತ್ಸಾಹವನ್ನು ನೀಡುವಂತೆ ವಿನಂತಿಸಿದರು.
ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಮಾತನಾಡಿ ಬಂಟರ ಸಂಘದಿಂದ ಸಮಾಜದಲ್ಲಿ ಸಾಧನೆ ಮಾಡಿದವರು ತುಂಬಾ ಮಂದಿ ಇದ್ದಾರೆ ಅವರನ್ನು ಗುರುತಿಸಲು ಇನ್ನೂ ಹೆಚ್ಚಿನ ಮಂದಿ ದಾನಿಗಳು ಮುಂದೆ ಬರುವಂತೆ ವಿನಂತಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು, ಮಾತೃ ಸಂಘದ ನಿರ್ದೇಶಕರುಗಳು, ಬಂಟರ ಸಂಘದ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಸೇರಿದಂತೆ ಅನೇಕ ಮಂದಿ ಭಾಗವಹಿಸಿದರು.
ಅಶೋಕ್ ರೈ ಅಭಿನಂದನಾ ಸಮಾರಂಭದ ಲೆಕ್ಕ ಪತ್ರ ಮಂಡನೆಯನ್ನು ಮಾಡಲಾಯಿತು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ವಂದಿಸಿದರು.