ಮೀರಾ-ಭಾಯಂದರ್ ಹೋಟೆಲ್ಸ್ ಎಸೋಸಿಯೇಶನ್ ಇದರ 20ನೇ ವಾರ್ಷಿಕ ಮಹಾಸಭೆಯು ನವೆಂಬರ್ 27ರ ಶುಕ್ರವಾರ ಸಾಯಂಕಾಲ ಗಂಟೆ 4:30 ರಿಂದ ಕಾಶಿ ಮೀರಾ ಸಮಿಪದ ಮುಂಬಯಿ ಅಹ್ಮದಾಬಾದ್ ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇಯಲ್ಲಿರುವ ಸಾಯಿ ಪ್ಯಾಲೇಸ್ ಆಂಡ್ ಗಾರ್ಡನ್ ಸಭಾಂಗಣದಲ್ಲಿ ಸಂಘಟನೆಯ ಅಧ್ಯಕ್ಷ ರಂಜನ್ ಎಲ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಮಹಾಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಆಯವ್ಯಯ ಪಟ್ಟಿಯನ್ನು ಮಂಡಿಸಲಾಗುವುದು. ಸಭೆಯಲ್ಲಿ ಸಂಘಟನೆಗೆ ಸಹಾಯ ಹಸ್ತ ನೀಡಿದವರನ್ನು, ಪ್ರಾಯೋಜಕರನ್ನು ಹಾಗೂ ನೆರೆಹೊರೆಯ ಸಂಘಟನೆಗಳ ಪದಾಧಿಕಾರಿಗಳನ್ನು ಗೌರವಿಸಲಾಗುವುದು. ಸಭೆಯಲ್ಲಿ ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಂಘಟನೆಯ ಅಧ್ಯಕ್ಷ ರಂಜನ್ ಎಲ್ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಕೋಶಾಧಿಕಾರಿ ಅನಿಲ್ ಆರ್ ಶೆಟ್ಟಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.





















































































































