ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಅಶೋಕನಗರ ಬಂಟ ಸಂಘದ ಅಧ್ಯಕ್ಷರಾದ ರವಿಚಂದ್ರ ಶೆಟ್ಟಿಯವರ ಸಂತಾಪ ಸೂಚಕ ಸಭೆಯು ನಡೆಯಿತು. ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿಯವರು ನುಡಿನಮನ ಸಲ್ಲಿಸಿದರು. ಡಾ. ಆಶಾಜ್ಯೋತಿ ರೈ, ಎಂ ಕರುಣಾಕರ ಶೆಟ್ಟಿ, ಸಿಎ ರಾಮಮೋಹನ್ ರೈ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಎಂ ಸುಂದರ ಶೆಟ್ಟಿ, ಜಯಶೀಲ ಅಡ್ಯಂತಾಯ, ಉಮೇಶ್ ರೈ, ದಿವಾಕರ ಸಾಮಾನಿ, ಸತೀಶ್ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






















































































































