ಮುಂಬೈ, ಥಾಣೆ ಜಿಲ್ಲೆ ಮತ್ತು ನವಿ ಮುಂಬಯಿಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯವರೊಂದಿಗೆ ವಿಶೇಷ ಸಭೆಯೊಂದನ್ನು ಎಪ್ರಿಲ್ 7ರಂದು ಥಾಣೆಯಲ್ಲಿ ಆಯೋಜಿಸಿಕೊಂಡಿದ್ದು ಈ ಬಗ್ಗೆ ಮಾ 27 ರಂದು ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ ಶೆಟ್ಟಿ ಅವರನ್ನು ಅವರ ನಿವಾಸದಲ್ಲಿ ಪನ್ವೇಲ್ ಮಹಾನಗರ ಪಾಲಿಕೆಯ ನಗರ ಸೇವಕ ಸಂತೋಷ್ ಜಿ ಶೆಟ್ಟಿ ಭೇಟಿಯಾಗಿ ಎಪ್ರಿಲ್ 7 ರಂದು ಥಾಣೆಯಲ್ಲಿ ನಡೆಯಲಿರುವ ತುಳು ಕನ್ನಡಿಗರ ಸಭೆಯ ಅಧ್ಯಕ್ಷತೆಯನ್ನು ವಹಿಸುವಂತೆ ವಿನಂತಿಸಿ, ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಎರ್ಮಾಳ್ ಹರೀಶ್ ಶೆಟ್ಟಿ, ಪನ್ವೇಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಪದ್ಮ ಹಾಗೂ ಪನ್ವೆಲ್ ಥಾಣೆ ಪರಿಸರದ ತುಳು ಕನ್ನಡಿಗರು ಪಾಲ್ಗೊಂಡಿದ್ದರು.