ಸಿಲ್ವರ್ ಪಾರ್ಕ್, ಮೀರಾರೋಡ್ ಪೂರ್ವದ ನಿವಾಸಿ ಶ್ರೀ ದುರ್ಗಾ ಭಜನಾ ಮಂಡಳಿಯ ಗೌರವ ಅಧ್ಯಕ್ಷ ಹಾಗೂ ಸ್ಥಳೀಯ ಹಲವಾರು ಸಂಘ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆಗೈದ ಯಕ್ಷಗಾನ ಪ್ರೇಮಿ ಮತ್ತು ಸಂಘಟಕ ಸಂಜೀವ ಶೆಟ್ಟಿ(63) ಅವರು ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ಫೆ.19 ರ ಸೋಮವಾರದಂದು ನಿಧನರಾದರು.
ಮೂಲತಃ ಕಾಸರಗೋಡು ಜಿಲ್ಲೆಯ ಹೇರೂರಿನ ಕಂಗ್ವ ಮನೆಯವರಾಗಿದ್ದ ಮೃತರು, ಪತ್ನಿ ಯೋಗಿತಾ ಶೆಟ್ಟಿ, ಪುತ್ರ ಪ್ರತೀಕ್, ಪುತ್ರಿ ಪ್ರಿಯಾಂಕಾ, ಮೂವರು ಸಹೋದರಿಯರು, ಆರು ಮಂದಿ ಸಹೋದರರು ಸೇರಿದಂತೆ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಗೌರವ ಸಂಪಾದಕ ಅರುಣ್ ಶೆಟ್ಟಿ ಎರ್ಮಾಳ್ ಹಾಗೂ ವ್ಯವಸ್ಥಾಪಕ ಸಂಪಾದಕ ರಂಜಿತ್ ಶೆಟ್ಟಿ ತೀವ್ರ ಸಂತಾಪ ಸೂಚಿಸಿದ್ದಾರೆ.